Home Mangalorean News Kannada News ಕಾಪು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢ

ಕಾಪು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢ

Spread the love

ಕಾಪು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢ

ಉಡುಪಿ: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳ ತಂದೆಗೆ ಕೊರೋನಾ ಪಾಸಿಟಿವ್ ದಾಖಲಾಗಿ ಆತಂಕದಲ್ಲಿರುವ ವೇಳೆಯಲ್ಲಿ ಈಗ ವಿದ್ಯಾರ್ಥಿನಿಗೆ ಕೂಡ ಕೋವಿಡ್ ಪಾಸಿಟಿವ್ ದೃಢಗೊಂಡಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಕಾಪು ತಾಲೂಕಿನ ವಿದ್ಯಾರ್ಥಿನಿಯೋರ್ವಳು ಜೂನ್ 25 ರಂದು ಎಸ್ ಎಸ್ ಎಲ್ ಸಿ ಕನ್ನಡ ಮತ್ತು ಜೂನ್ 27ರಂದು ನಡೆದ ಗಣಿತ ಪರೀಕ್ಷೆಯನ್ನು ಬರೆದಿದ್ದರು. ಈ ನಡುವೆ ವಿದ್ಯಾರ್ಥಿನಿಯ ತಂದೆಗೆ ಕೋರೊನಾ ಪಾಸಿಟಿವ್ ಇರುವುದು ಶನಿವಾರ ದೃಢಪಟ್ಟ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಜೂನ್ 28 ಭಾನುವಾರ ವಿದ್ಯಾರ್ಥಿನಿಯ ಪರೀಕ್ಷಾ ವರದಿ ಬಂದಿದ್ದು, ಇದರಲ್ಲಿ ಪಾಸಿಟಿವ್ ದೃಢಟಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


Spread the love

Exit mobile version