Home Mangalorean News Kannada News ಕುಖ್ಯಾತ ರೌಡಿ ಕಾಲಿಯಾ ರಫಿಕ್ ಗುಂಡಿಕ್ಕಿ ಕೊಲೆ

ಕುಖ್ಯಾತ ರೌಡಿ ಕಾಲಿಯಾ ರಫಿಕ್ ಗುಂಡಿಕ್ಕಿ ಕೊಲೆ

Spread the love

ಕುಖ್ಯಾತ ರೌಡಿ ಕಾಲಿಯಾ ರಫಿಕ್ ಗುಂಡಿಕ್ಕಿ ಕೊಲೆ

ಮಂಗಳೂರು: ಕರ್ನಾಟಕ ಕೇರಳ ಸೇರಿದಂತೆ ವಿವಿಧ ಕೊಲೆ, ಕೊಲೆ ಯತ್ನ ಸುಲಿಗೆ ಪ್ರಕರಣಗಳಲ್ಲಿ ಆರೋಪಿಗಯಾಗಿದ್ದ ಕುಖ್ಯಾತ ರೌಡಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಕೋಟೆಕಾರು ಬಳಿ ನಡೆದಿದೆ
ಮೃತನನ್ನು ಕುಖ್ಯಾತ ರೌಡಿ ಕಾಲಿಯಾ ರಫಿಕ್ (35) ಎಂದು ಗುರುತಿಸಲಾಗಿದೆ.

ಕಾಲಿಯಾ ರಫಿಕ್ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ದುಷ್ಕರ್ಮಿಗಳು ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡೆದು ಅಡ್ಡಗಟ್ಟಿದ್ದರು. ಈ ವೇಳೆ ಒಡಲು ಯತ್ನಿಸಿದ ರಫಿಕ್ ಮೇಲೆ ದುಷ್ಕರ್ಮಿಗಳು ಗುಂಡಿಕ್ಕಿ ತಲವಾರಿನಿಂದ ಕಡಿದು ಕೊಲೆಗೈದಿದ್ದಾರೆ.
ರಫಿಕ್ ಜೊತೆ ಕಾರಿನಲ್ಲಿ ನಾಲ್ವರು ಮಂಗಳೂರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ರಫೀಕ್ ಕಾರಿನಲ್ಲಿದ್ದ ಸಂಬಂಧಿ ಜಾಹಿದ್ ಎಂಬವರ ಮೇಲೂ ತಲವಾರಿನಿಂದ ಹಲ್ಲೆಗೈದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

Exit mobile version