ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಗರಂ
ಮಂಗಳೂರು: ಮಂಗಳೂರಿನಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಗೈರುಹಾಜರಾಗಿರುವ ಸಂಬಂಧ ಸಚಿವ ಯು.ಟಿ. ಖಾದರ್ ಅವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಬದಲಿಗೆ ಡಿಸಿಪಿ ಶ್ಯಾಮ್ ವರ್ಗೀಸ್ ಕಳುಹಿಸಿದ್ದ ಕಮಿಷನರ್ ನಡೆ ಪ್ರಶ್ನಿಸಿದ ಸಚಿವರು, ಪೊಲೀಸ್ ಕಮಿಷನರ್ ಸಭೆಗೆ ಗೈರಾಗಿದ್ದಕ್ಕೆ ಅನುಮತಿ ಪಡೆದಿದ್ದಾರಾ? ಕಾನೂನು ಪಾಠ ಮಾಡ್ತಾರೆ, ಅವರಿಗೆ ಕಾನೂನು ಅನ್ವಯ ಆಗಲ್ವಾ? ಎಂದು ಗರಂ ಆದ ಪ್ರಸಂಗ ನಡೆದಿದೆ.
