ದಾಖಲೆಗಳ ಡಿಜಿಟಲೀಕರಣದ ಹೆಸರಿನಲ್ಲಿ ಅನಗತ್ಯ ಕಿರುಕುಳ ನಿಲ್ಲಿಸಿ – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಕುಂದಾಪುರದ ಭೂ ನ್ಯಾಯ ವಿಭಾಗದಲ್ಲಿ ದಾಖಲೆಗಳ ಡಿಜಿಟಲೀಕರಣದ ಹೆಸರಿನಲ್ಲಿ ಭೂ ನ್ಯಾಯ ವಿಭಾಗದಲ್ಲಿ ದಾಖಲೆಗಳ ದೃಡೀಕೃತ ನಕಲು ಪ್ರತಿ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ.
ದಾಖಲೆಗಳ ಡಿಜಿಟಲೀಕರಣ ದಾಖಲೆಗಳನ್ನು ರಕ್ಷಣೆ ಮಾಡಿ ಇಡಲು ಸರ್ಕಾರದ ಒಂದು ಉತ್ತಮ ಕ್ರಮ. ಆದರೆ ಡಿಜಿಟಲೀಕರಣ ಪ್ರಾರಂಭ ಹಂತದಲ್ಲಿ ಇರುವಾಗಲೇ ದಾಖಲೆ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರ ಅರ್ಜಿ ತಿರಸ್ಕರಿಸುವುದರಿಂದ ಸಾಲ ಪಡೆಯಲು, ನ್ಯಾಯಾಲಯಕ್ಕೆ ದಾಖಲೆ ಒದಗಿಸಲು, ಭೂ ನೋಂದಾವಣೆ ಮಾಡಲು ಹಾಗೂ ಇತ್ಯಾದಿ ಅಗತ್ಯ ಉದ್ದೇಶಗಳಿಗೆ ಇದರಿಂದ ಜನಸಾಮಾನ್ಯರಿಗೆ ಅತೀವ ತೊಂದರೆಯಾಗುತ್ತಿದೆ. ತಾಲ್ಲೂಕು ಆಡಳಿತ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಆದ ನಂತರವೇ ಈ ಕ್ರಮ ಅನುಸರಿಸಲಿ ಅಲ್ಲಿಯ ತನಕ ಮೊದಲಿನಂತೆ ದೃಡೀಕೃತ ನಕಲು ಪ್ರತಿ ನೀಡಲು ಕ್ರಮವಹಿಸಬೇಕು ಎಂದು ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.