Home Mangalorean News Kannada News ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆ

ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆ

Spread the love

ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆ

ಉಡುಪಿ: ಕರ್ನಾಟಕ ಕರಾವಳಿಯ ಪ್ರಪ್ರಥಮ ಲಯನ್ಸ್ ಕ್ಲಬ್, ಪ್ರತಿಷ್ಠಿತ ಲಯನ್ಸ್ ಕ್ಲಬ್ ಉಡುಪಿ ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಅಲೆವೂರು ದಿನೇಶ್ ಕಿಣಿ ಆಯ್ಕೆಯಾಗಿದ್ದಾರೆ.

ದಿನೇಶ್ ಕಿಣಿ ಅವರು ಅಲೆವೂರಿನ ಶಾಂತಿನಿಕೇತನ ಶಾಲಾ ಸಂಚಾಲಕರಾಗಿ, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿರುತ್ತಾರೆ.

ಕಾರ್ಯದರ್ಶಿಯಾಗಿ ಡಾ. ರೋಶನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ರಮಾನಂದ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಎಂ.ಡಿ. ಭಟ್, ನಿಕಟಪೂರ್ವ ಅಧ್ಯಕ್ಷರಾಗಿ ಲೂಯಿಸ್‌ ಲೋಬೋ, ಪ್ರಥಮ ಉಪಾಧ್ಯಕ್ಷರಾಗಿ ನಾಗರಾಜ್ ಸಂಕೊಳ್ಳಿ, ದ್ವಿತೀಯ ಉಪಾಧ್ಯಕ್ಷರಾಗಿ ವಿಜಯ ಕುಮಾರ್ ಮುದ್ರಾಡಿ, ತೃತೀಯ ಉಪಾಧ್ಯಕ್ಷರಾಗಿ ಎಸ್ ಟಿ ಕುಂದರ್, ಲಯನ್ ಟೇಮರ್ ಆಗಿ ಲೆಸ್ಲಿ ಕರ್ನೇಲಿಯೊ, ಟೈಲ್ ಟ್ವಿಸ್ಟರ್ ಆಗಿ ಮನೋಜ್ ಪ್ರಭು, ಎಲ್ ಸಿ ಎಫ್ ಕೊ-ಆರ್ಡಿನೇಟರ್ ಆಗಿ ರಿಚರ್ಡ್ ರೋಡ್ರಿಗಸ್, ಜಿಎಟಿ ಕೊ-ಆರ್ಡಿನೇಟರ್ ಆಗಿ ಶ್ರೀನಿವಾಸ್ ಪೈ ಎಚ್., ಜಿಎಂಟಿ ಕೊ-ಆರ್ಡಿನೇಟರ್ ಆಗಿ ದಾಮೋದರ್ ಎಂ. ಶೆಟ್ಟಿ, ಜಿ ಎಲ್ ಟಿ ಕೊ-ಆರ್ಡಿನೇಟರ್ ಆಗಿ ಡಾ. ಕೆ.ಕೆ. ಕಲ್ಕೂರ್, ಜಿ ಎಸ್ ಟಿ ಕೊ-ಆರ್ಡಿನೇಟರ್ ಆಗಿ ವಿಷ್ಣುದಾಸ್‌ ಪಾಟೀಲ್, ಕಾರ್ಯಕ್ರಮ ಸಂಯೋಜಕರಾಗಿ ರೇಖಾ ಪೈ, ಲಿಯೋ ಸಲಹೆಗಾರರಾಗಿ ಕವಿತಾ ನೆಲ್ಸನ್, ಬುಲೆಟಿನ್ ಸಂಪಾದಕರಾಗಿ ದೀವಾ ನಂಬಿಯಾರ್, ಸಾಂಸ್ಕೃತಿಕ ಸಂಯೋಜಕರಾಗಿ ರಂಜನ್ ಕಲ್ಕೂರ ಮತ್ತು ನವೀನ್ ಬಲ್ಲಾಳ್,  ಶಾಶ್ವತ ಯೋಜನಾ ಸಂಯೋಜಕರಾಗಿ ಡಿ. ಎಂ. ಶೆಟ್ಟಿ, ಲಯನ್ಸ್ ಕ್ವೆಸ್ಟ್ ಸಂಯೋಜಕರಾಗಿ ಇಂದು ರಮಾನಂದ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಪ್ರಕಾಶ್ ಅಂದ್ರಾಡೆ, ಪಾಸ್ಟ್ ಪ್ರಸಿಡೆಂಟ್ಸ್ ಫೋರಂ ಚೇರ್ ಪರ್ಸನ್ ಆಗಿ ಡಾ. ಎಚ್ ಬಾಸ್ಕರ್ ಶೆಟ್ಟಿ, ಲಯನ್ಸ್ ಭವನ ಟ್ರಸ್ಟ್ ನ ಆಡಳಿತ ಟ್ರಸ್ಟಿಯಾಗಿ ರಾಜಗೋಪಾಲ್ ಎಸ್., ಪ್ರಥಮ ವರ್ಷದ ನಿರ್ದೇಶಕರಾಗಿ ಬಾಸ್ಕರ್ ಶೆಟ್ಟಿ, ವರ್ವಾಡಿ ಪ್ರಸಾದ್ ಶೆಟ್ಟಿ, ಸುಪ್ರೀತ್ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ರವೀಶ್ಚಂದ್ರ ಶೆಟ್ಟಿ,  ದ್ವಿತೀಯ ವರ್ಷದ ನಿರ್ದೇಶಕರಾಗಿ ಡಾ. ಮನೋರಂಜನದಾಸ್ ಹೆಗ್ಡೆ, ರಂಜನ್ ಕೆ., ಶ್ರೀಧರ್ ಶೆಟ್ಟಿ ಅಲೆವೂರು, ಡಯಾನಾ ವಿಠಲ್ ಪೈ, ರಘುಪತಿ ರಾವ್, ಸಲಹೆಗಾರರಾಗಿ ಡಾ. ಎ. ರವೀಂದ್ರನಾಥ್ ಶೆಟ್ಟಿ, ಯು. ದಾಮೋದರ್ ಮತ್ತು ಅಲೆವೂರು ಗಣಪತಿ ಕಿಣಿ ಆಯ್ಕೆಯಾಗಿದ್ದಾರೆ.


Spread the love

Exit mobile version