Home Mangalorean News Kannada News ಸರ್ವ ಸಮುದಾಯಗಳ ಅಭಿವೃದ್ಧಿಯ ಕಲ್ಪನೆಯ ಬಜೆಟ್ :ಮುಖ್ಯಮಂತ್ರಿಗೆ ಐವನ್ ಅಭಿನಂದನೆ

ಸರ್ವ ಸಮುದಾಯಗಳ ಅಭಿವೃದ್ಧಿಯ ಕಲ್ಪನೆಯ ಬಜೆಟ್ :ಮುಖ್ಯಮಂತ್ರಿಗೆ ಐವನ್ ಅಭಿನಂದನೆ

Spread the love

ಸರ್ವ ಸಮುದಾಯಗಳ ಅಭಿವೃದ್ಧಿಯ ಕಲ್ಪನೆಯ ಬಜೆಟ್ :ಮುಖ್ಯಮಂತ್ರಿಗೆ ಐವನ್ ಅಭಿನಂದನೆ

ಮಂಗಳೂರು: ರಾಜ್ಯದ ಅಭಿವೃದ್ಧಿ ಪರ ಸರ್ವ ಸಮುದಾಯಗಳ ಅಭಿವೃದ್ಧಿಯ ಕಲ್ಪನೆಯ ಅತ್ಯುತ್ತಮ ಬಜೆಟ್ ಮಂಡಿಸಿದ ರಾಜ್ಯದ ಮುಖ್ಯಮಂತ್ರಿಸಿದ್ಧರಾಮಯ್ಯ ಅರವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ  ಐವನ್ ಡಿ’ಸೋಜಾ ರವರ ಅಭಿನಂದನೆ ಸಲ್ಲಿಸಿದ್ದಾರೆ.

ಅವಿಭಜಿತ ದ.ಕ.ಜಿಲ್ಲೆಯ ಪ್ರಮುಖ ಬೇಡಿಕೆಗಳಿಗೆ ಸ್ಪಂದನೆ ನೀಡಿ ಐದು ತಾಲೂಕು ರಚನೆ ಮಾಡಿ ಗಾಂಧಿ ಕಂಡ ರಾಮರಾಜ್ಯದ ಕನಸನ್ನು ನೇರೆವೆರಿಸಿದ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿ 460ಕ್ಕೂ ಅಧಿಕ ನೂತನ ಗ್ರಾಮ ಪಂಚಾಯತ್ ರಚಿಸಿ ದ.ಕ.ಜಿಲ್ಲೆಯ ಪ್ರಮುಖ ಬೇಡಿಕೆಯಾದ ಕುಡಿಯುವ ನೀರಿನ ಪ್ರಮುಖ ಸಮಸ್ಯೆ ನೀಗಿಸಲು ಪಶ್ಚಿಮ ವಾಹಿನಿ ಯೋಜನೆ ಪ್ರಾರಂಭಿಸಲು ರೂ.100 ಕೋಟಿ ಮೀಸಲಿಟ್ಟು ಈ ಯೋಜನೆಗೆ ಚಾಲನೆ ನೀಡಿ, ಚೆಕ್ ಡ್ಯಾಮ್ ರಚಿಸಲು ಕ್ರಮಕೈಗೊಂಡಿರುವುದು ಶ್ಲಾಂಘನೀಯವಾಗಿದೆ. ಜೊತೆಯಲ್ಲಿ ಜಿಲ್ಲೆಗೆ

  • ಒಂದು ಆರ್.ಟಿ.ಓ ಕಛೇರಿ.
  • ಬ್ಯಾರಿ ಸಮುದಾಯದ ಬೇಡಿಕೆಗೆ ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಾಯನ ಪೀಠ.
  • ಪಿಲುಕುಳದಲ್ಲಿ ಪ್ರದೇಶಿಕ ವಿಜ್ಞಾನ ಕೇಂದ್ರದಲ್ಲಿ ತಾರಾಲಯ
  • ಮಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ-67 ರೂ.50.00ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ.
  • ಉಡುಪಿಯಲ್ಲಿ ಈಜುಕೋಳ
  • ಇ.ಎಸ್.ಐ ಆಸ್ಪತ್ರೆಯ ಉನ್ನತೀಕರಣ
  • ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ರೂ.10.00ಕೋಟಿ ಅನುದಾನ.
  • ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ರೂ.125 ಕೋಟಿಯಿಂದ ರೂ.175 ಕೋಟಿ ಅನುದಾನ ಏರಿಕೆ.
  • ಸ್ಮಶಾನಕ್ಕೆ ಗೋಡೆ ಮತ್ತು ಮೂಲಭೂತ ಸೌಕರ್ಯಕ್ಕೆ ಯೋಜನೆ.
  • ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂದುರಿಗಿದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಕೇರಳ ಮಾದರಿ ಕಾರ್ಯಕ್ರಮ.
  • ಕರಾವಳಿ ಪ್ರಾಧಿಕಾರಕ್ಕೆ ರೂ. 20.00ಕೋಟಿ ಅನುದಾನ ನೀಡುವ ಮುಖಾಂತರ ಕರಾವಳಿ ಪ್ರದೇಶದ ಅಭಿವೃದ್ಧಿ.
  • ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಯಿಂದ 7 ಕೆ.ಜಿ ರವರಿಗೆ ಆಹಾರಧಾನ್ಯ ಉಪಯೋಗ.
  • ಕ್ಷೀರಭಾಗ್ಯ ಯೋಜನೆ 3 ದಿನಗಳಿಂದ 5 ದಿನಗಳಿಗೆ ವಿತರಣೆ.
  • ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಮಧ್ಯಾಹ್ನ ಊಟಕ್ಕೆ ಮೊಟ್ಟೆ ನೀಡುವ ಕಾರ್ಯಕ್ರಮ.
  • ನಮ್ಮ ಕ್ಯಾಂಟೀನ್ ಮುಖಾಂತರ ಬೆಳಿಗ್ಗೆ ಉಪಹಾರಕ್ಕೆ ರೂ.5/-, ಊಟಕ್ಕೆ ರೂ.10/- ಮೂಲಕ 198 ಕ್ಯಾಂಟೀನ್ ಸ್ಥಾಪನೆ.
  • ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಕ್ರಮ.
  • ಬಹುಕಾಲದಿಂದ ಪಂಚಾಯತ್ ವ್ಯಾಪ್ತಿಯಿಂದ ವಿದ್ಯುತ್ ಬಿಲ್ ಬಾಕಿಯನ್ನು ರೂ. 3766 ಕೋಟಿ ಪಾವತಿಗೆ ಕ್ರಮ.
  • ಜಿಲ್ಲಾಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ಗೌರವಧನ ಏರಿಕೆ.
  • ಭಾಗ್ಯಜ್ಯೋತಿ ಉಚಿತವಾಗಿ ನೀಡುತ್ತಿರುವ 18 ರಿಂದ 40 ಯೂನಿಟ್ ಏರಿಕೆ. ಅನೇಕ ಯೋಜನೆಗಳಿಂದ ಜನಪ್ರಿಯ ಬಜೆಟ್ ಆಗಿದ್ದು, ಜಿಲ್ಲೆಯ ಮತ್ತು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಬಜೆಟ್‍ಯಾಗಿ ಮೂಡಿಬಂದಿದೆ. ಬಜೆಟ್ ಮೂಲಕ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೆರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Exit mobile version