ಸಾಸ್ತಾನ ಮಿತ್ರರ ಬೃಹತ್ ಸ್ವಚ್ಚತಾ ಆಂದೋಲನಕ್ಕೆ ಚಾಲನೆ
ಕೋಟ: ಸಾಸ್ತಾನ ಮಿತ್ರರು ಈ ಭಾಗದಲ್ಲಿ ವಿಭಿನ್ನವಾದ ಕಾರ್ಯಕ್ರಮಗಳನ್ನು ರೂಪಿಸಿ ಜನಮನ್ನಣೆಯನ್ನು ಗಳಿಸಿದ್ದಾರೆ. ಪರಿಸರ, ಪ್ರಾಣಿಗಳು ಮತ್ತು ಕಷ್ಟದಲ್ಲಿ ಜೀವನ ಸಾಗಿಸುವವರ ನೆರವಿಗೆ ಬರುವ ಇವರ ಕಾರ್ಯ ಇನ್ನು ಮುಂದೆಯೂ ಹೀಗೆ ಸಾಗಲಿ. ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಹೇಳಿದರು.
ಅವರು ಗುರುವಾರದಂದು ಸಾಸ್ತಾನ ಗೋಳಿಗರಡಿ ದೇವಸ್ಥಾನ ವಠಾರದಲ್ಲಿ ಸಾಸ್ತಾನ ಮಿತ್ರು ಆಯೋಜಿಸಿದ್ದ ಬ್ರಹತ್ ಸ್ವಚ್ಛತಾ ಆಂದೋಲನವನ್ನು ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಧಂರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಅಮೃತ್ ಶೆಣೈ, ವೈದ್ಯ ಡಾ.ಹೇಮಂತ್ ಕುಮಾರ್, ಸ್ವಚ್ಛಭಾರತ್ ಅಭಿಯಾನದ ಉಡುಪಿ ರಾಯಭಾರಿ ಅವಿನಾಶ್ ಕಾಮತ್, ತಾಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಉದಯ ಕುಮಾರ್, ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ಪೂಜಾರಿ, ಐರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಸೆಸ್ ರೋಡ್ರಿಗಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾಶ್ ಖಾರ್ವಿ, ಐರೋಡಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿಠಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಾಸ್ತಾನ ಮಿತ್ರರ ನೂತನ ಕಾರ್ಯಕ್ರಮ ಸೆಲ್ಫಿ ವಿತ್ ಕ್ಲೀನ್ ಸ್ಪರ್ಧೆಗೆ ಇದೆ ಸಂದರ್ಭ ಚಾಲನ ನೀಡಲಾಯಿತು. ಬಳಿಕ ಸಾಸ್ತಾನ ಮಿತ್ರರು ತಂಡದ ಸದಸ್ಯರು ಸಾಸ್ತಾನ ಪೇಟೆಯ ಆಸುಪಾಸಿನ ರಸ್ತೆಯ ಅಕ್ಕಪಕ್ಕವನ್ನು ಸ್ವಚ್ಛಗೊಳಿಸಿದರು.