Home Mangalorean News Kannada News ಸೆಪ್ಟೆಂಬರ್ 28 ರಿಂದ ಶ್ರೀ ಕೃಷ್ಣ ಮಠಕ್ಕೆ ನಿಬಂಧನೆಯೊಂದಿಗೆ ಭಕ್ತರಿಗೆ ಪ್ರವೇಶ

ಸೆಪ್ಟೆಂಬರ್ 28 ರಿಂದ ಶ್ರೀ ಕೃಷ್ಣ ಮಠಕ್ಕೆ ನಿಬಂಧನೆಯೊಂದಿಗೆ ಭಕ್ತರಿಗೆ ಪ್ರವೇಶ

Spread the love

ಸೆಪ್ಟೆಂಬರ್ 28 ರಿಂದ ಶ್ರೀ ಕೃಷ್ಣ ಮಠಕ್ಕೆ ನಿಬಂಧನೆಯೊಂದಿಗೆ ಭಕ್ತರಿಗೆ ಪ್ರವೇಶ

ಉಡುಪಿ: ಕೊರೋನಾ ಕಾರಣದಿಂದ ಭಕ್ತರ ಪ್ರವೇಶ ನಿಷೇಧ ಹೇರಿದ್ದ ಕೃಷ್ಣ ಮಠಕ್ಕೆ ಸೆಪ್ಟೆಂಬರ್ 28 ರಿಂದ ನಿಬಂಧನೆಯೊಂದಿಗೆ ಪ್ರವೇಶ ಅವಕಾಶ ನೀಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜ್ ಅವರು ತಿಳಿಸಿದರು.

ಈ ಕುರಿತು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೊರೊನಾ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಂತೆ ಮಾರ್ಚ್ 22ರಿಂದ ಶ್ರೀಕೃಷ್ಣ ಮಠದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅನಂತರ ಸರಕಾರ ಮುಜರಾಯಿ ದೇವಸ್ಥಾನಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿತು. ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ದರ್ಶನದ ಒಂಭತ್ತು ಕಿಂಡಿಗಳ ಮೂಲಕವೇ ಮಾಡಬೇಕಾಗಿತ್ತು, ಕಿಂಡಿಗೆ ಮುಖ ತಾಗುವುದೇ ಹೆಚ್ಚು. ಈ ಎಲ್ಲಾ ಕಾರಣಗಳಿಂದ ಶ್ರೀಮಠವು ಜನರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶ್ರೀಕೃಷ್ಣ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿತ್ತು.

ಪ್ರಸ್ತುತ ಕಾಲಘಟ್ಟದಲ್ಲಿ ಉಡುಪಿ ಆಸ್ಪತ್ರೆಗಳು ರೋಗಿಗಳ ಸಂಖ್ಯೆ ಅಧಿಕವಾಗಿರುವುದು. ರೋಗಿಗಳಿಗೆ ವೆಂಟಿಲೇಟರ್‌ಗಳು ಸಿಗದೇ ಇರುವುದು ಕಂಡುಬರುತ್ತಿದೆ. ಆದರೆ ಸೆ.21ರ ಬಳಿಕ ಕೇಂದ್ರ ಸರಕಾರವು ಮಾರ್ಗಸೂಚಿಗಳನ್ನು ಸಡಿಲಗೊಳಿಸಲಿರುವುದರಿಂದ ಕೆಲವೊಂದು ಷರತ್ತುಗಳೊಂದಿಗೆ ಶ್ರೀಕೃಷ್ಣ ಮಠದಲ್ಲಿ ಸ್ಥಳೀಯ ಪರವೂರ ಭಕ್ತರಿಗೆ ಅನುಕೂಲವಾಗಲೆಂದು ಪ್ರವೇಶವನ್ನು ಸೆಪ್ಟೆಂಬರ್ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮಾರ್ಗದರ್ಶನದಂತೆ ಪರ್ಯಾಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ. 28ರಿಂದ ಗುರುಗಳಾದ ಅದಮಾರು ಮಠಾಧೀಶರಾದ ಭಕ್ತರಿಗೆ ತೊಂದರೆ ಯಾಗಬಾರದು ಎಂಬ ದೃಷ್ಟಿಯಿಂದ ಈ ಕೆಳಗೆ ಕಂಡ ನಿಯಮಾವಳಿಗಳನ್ನು ಶ್ರೀಮಠವು ರೂಪಿಸಿದೆ ಎಂದರು:

ಅಪರಾಹ್ನ 2.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಭಕ್ತರಿಗೆ ಪ್ರವೇಶ ಕಲ್ಪಿಸಲಾಗುವುದು.

ಶ್ರೀಕೃಷ್ಣ ದೇವರ ದರ್ಶನಕ್ಕೆ ಬರುವ ಸ್ಥಳೀಯ ಮತ್ತು ಪರವೂರ ಭಕ್ತರು ಕಡ್ಡಾಯವಾಗಿ ರಾಜಾಂಗಣ ಬಳಿ ಇರುವ ಉತ್ತರ ದ್ವಾರದ ಮೂಲಕ ಪ್ರವೇಶಿಸಬೇಕಾಗಿ ವಿನಂತಿ,

ಶ್ರೀಕೃಷ್ಣ ದೇವರ ದರ್ಶನ ಮಾಡಲು ಇಚ್ಚಿಸುವ ಯಾತ್ರಾರ್ಥಿಗಳು ರಾಜಾಂಗಣ ಬಳಿ ಇರುವ ಉತ್ತರದ್ವಾರದ ಮೂಲಕ ಭೋಜನಶಾಲೆಯ ಮೇಲ್ಗಡೆಯಿಂದ ಸಾಗಿ ಗರುಡ ದೇವರ ಬಳಿ ಕೆಳಗಿಳಿದು ದೇವರದರ್ಶನ ಮಾಡಿ ಮುಖ್ಯಪ್ರಾಣ ದೇವರ ಬಳಿ ಇರುವ ಮೆಟ್ಟಿಲುಗಳ ಮೂಲಕ ಸಾಗಿ ಅಲ್ಲಿಂದಲೇ ನಿರ್ಗಮಿಸಬೇಕಾಗಿ ವಿನಂತಿ

 ಪ್ರಸ್ತುತ ಎಲ್ಲಾ ಊರ-ಪರವೂರ ಭಕ್ತರು ಉತ್ತರ ದ್ವಾರದಿಂದ ಪ್ರವೇಶಿಸಿ ಸಹಕರಿಸಬೇಕಾಗಿ ವಿನಂತಿ.

 ಸ್ಥಳೀಯ ಭಕ್ತರು ಮುಂದಿನ ದಿನಗಳಲ್ಲಿ ರಥ ಬೀದಿಯಿಂದ ಮಧ್ವ ಸರೋವರದ ಮೇಲಿರುವ ದಾರಿಯಿಂದ ಸೇವಾ ಕಚೇರಿ ಬಳಿ ಮುಂದೆ ಸಾಗಿ ಅಲ್ಲಿಂದ ಶ್ರೀಕೃಷ್ಣ ಮಠದಲ್ಲಿ ಪ್ರವೇಶಿಸಿ ದರ್ಶನ ಪಡೆಯಬಹುದು.

ಭದ್ರತಾ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಈ ಮೇಲಿನ ಮಾರ್ಗದಲ್ಲಿ (ಪ್ರವೇಶ ದ್ವಾರ 10) ಪ್ರವೇಶಬಯಸುವ ಸ್ಥಳೀಯ ಭಕ್ತರು ಶ್ರೀಕೃಷ್ಣ ಮಠದಿಂದ ಕಡ್ಡಾಯವಾಗಿ ಪ್ರವೇಶ ಪತ್ರ ಪಡೆಯಬೇಕಾಗಿ ವಿನಂತಿ. ಇಲ್ಲವೇ ರಾಜಾಂಗಣದ ಉತ್ತರ ದ್ವಾರದ ಮೂಲಕ (ಯಾತ್ರಾರ್ಥಿಗಳಿಗೆ ಕಲ್ಪಿಸುವ ಮಾರ್ಗದಲ್ಲಿ) ಸಾಗಿ ದರ್ಶನ ಪಡೆಯಬಹುದು.

ಶ್ರೀಕೃಷ್ಣ ಮಠದಲ್ಲಿ ಸೇವೆಗಳು ಅವಕಾಶವಿದ್ದು, ಭಗವದ್ಭಕ್ತರು ಸೇವಾ ಕೌಂಟರ್ ನಲ್ಲಿ ಪ್ರಸಾದವನ್ನು ಸ್ವೀಕರಿಸಬಹುದು.

ಪ್ರಸ್ತುತ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ,

 ಯಾವ ಭಕ್ತರು ಮಠದ ಆವರಣದಲ್ಲಿ ಮಂತ್ರ, ಪಾರಾಯಣ ಗಳನ್ನು ಅಥವಾ ಯಾವುದೇ ಶಬ್ದ ಉಚ್ಛಾರಣೆ ಮಾಡಬಾರದಾಗಿ ವಿನಂತಿ. ಭಕ್ತರು ಮೌನವಾಗಿದ್ದು, ಅನವಶ್ಯಕ ಮಾಡಬಾರದಾಗಿ ವಿನಂತಿ,

ಭಕ್ತರು ಮಠದ ಆವರಣದಲ್ಲಿ ಮುಟ್ಟುವುದೇ ಮೊದಲಾದ ಕಾರ್ಯಚಟುವಟಿಕೆಗಳನ್ನು ಮಾಡಬಾರದಾಗಿ ವಿನಂತಿಸಲಾಗಿದೆ.

  ದರ್ಶನ ಮಾಡುವಾಗ ಇತರ ಭಕ್ತರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕಾದ ವಿನಂತಿ

ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬೇಕಾಗಿ ವಿನಂತಿ.

ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಿ ಕೊಳ್ಳ ಬೇಕಾಗಿ ವಿನಂತಿ.

  ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದು, ಅದನ್ನು ಬಳಸಿಕೊಳ್ಳಬೇಕಾಗಿ ವಿನಂತಿ.

ಭದ್ರತಾ ಸಿಬ್ಬಂದಿಗಳು ಸೂಚಿಸುವ ನಿಯಮಗಳನ್ನು ಪಾಲಿಸಬೇಕಾಗಿ ವಿನಂತಿ,

ಹಿರಿಯ ನಾಗರಿಕರು, ಚಿಕ್ಕ ಮಕ್ಕಳ ಶರೀರ ಸೂಕ್ಷ್ಮ ವಾಗಿರುವುದರಿಂದ ಅವರೆಲ್ಲರೂ ಮನೆಯಲ್ಲೇ ಇದ್ದು, ದೇವರ ಪ್ರಾರ್ಥನೆ ಮಾಡುವುದು ಉತ್ತಮ.

ಭೋಜನ ಪ್ರಸಾದವನ್ನು ಪರಿಸ್ಥಿತಿಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು.

 ತೀರ್ಥ ಪ್ರಸಾದವನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು.

 ಶ್ರೀಕೃಷ್ಣ ಮಠದ ಒಳಗೆ ತುಪ್ಪ, ಎಳ್ಳೆಣ್ಣೆ ದೀಪಗಳನ್ನು ಬೆಳಗುವ ಬದಲು ಶ್ರೀಮಠದ ಕೌಂಟರಿನಲ್ಲಿ ಸಿಗುವ ಶುದ್ಧ ಎಳ್ಳನ್ನು ಪಡೆದು ಒಪ್ಪಿಸಬೇಕಾಗಿ ವಿನಂತಿ. ಭಕ್ತರು ನೀಡಿದ ಶುದ್ಧ ಎಳ್ಳಿನಿಂದ ತಯಾರಿಸಿದ ಎಣ್ಣೆಯನ್ನು ಋತ್ವಿಜರು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದೀಪಗಳು ಬಳಸುತ್ತಾರೆ.

ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರೂ ಹಿರಿಯ ನಾಗರಿಕರು ಹಾಗೂ ಮಕ್ಕಳು ಮನೆಯಲ್ಲಿದ್ದು ಪ್ರಾರ್ಥನೆ ಸಲ್ಲಿಸುವುದು ತುಂಬಾ ಶ್ರೇಯಸ್ಸು ಎಂಬುದು ಪರ್ಯಾಯ ಶ್ರೀಗಳಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶಯವಾಗಿದೆ ಎಂದರು .

ಶ್ರೀಕೃಷ್ಣ ಮಠದಲ್ಲಿ ಹೊಸದಾಗಿ ನಿರ್ಮಿಸಿದ ಆಗಮನ ಮತ್ತು ನಿರ್ಗಮನ ದಾರಿಗಳನ್ನು ಸ್ಥಳೀಯ ಭಕ್ತರು ವೀಕ್ಷಿಸಬಹುದು ಮತ್ತು “ಈ ಮಾರ್ಗಗಳಲ್ಲಿ ಪ್ರವೇಶಿಸಿದರೆ ಗರುಡ ಮುಖ್ಯಪ್ರಾಣ ದೇವರಿಗೆ ಪ್ರದಕ್ಷಿಣೆ ಸಲ್ಲಿಸಿದಂತಾಗುತ್ತದೆ ಎಣದರಯ

 ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಗೋವಿಂದರಾಜ್,    ಯಶ್‌ಪಾಲ್ ಸುವರ್ಣ,   ದಿನೇಶ್ ಪುತ್ರನ್, ಹೈಟೆಕ್ ಪ್ರದೀಪ್ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version