Home Mangalorean News Kannada News ಸ್ತ್ರೀ ಆರೋಗ್ಯ ಮತ್ತು ಕಾಳಜಿ: ಮಾಹಿತಿ ಕಾರ್ಯಗಾರ  

ಸ್ತ್ರೀ ಆರೋಗ್ಯ ಮತ್ತು ಕಾಳಜಿ: ಮಾಹಿತಿ ಕಾರ್ಯಗಾರ  

Spread the love

ಸ್ತ್ರೀ ಆರೋಗ್ಯ ಮತ್ತು ಕಾಳಜಿ: ಮಾಹಿತಿ ಕಾರ್ಯಗಾರ  

ಮಂಗಳೂರು :ಫೆಬ್ರವರಿ 23 ರಂದು ಮಂಗಳೂರು ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಇಲ್ಲಿಯ ಮಹಿಳಾ ವೇದಿಕೆ ಹಾಗೂ ಯುವ ರೆಡ್ ಕ್ರಾಸ್ ವತಿಯಿಂದ ವಿದ್ಯಾರ್ಥಿನಿಯರಿಗಾಗಿ “ಸ್ತ್ರೀ ಆರೋಗ್ಯ ಮತ್ತು ಕಾಳಜಿ” ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸಾರಾ ಆರ್ಯುವೇದ ಆಸ್ಪತ್ರೆಯ ಡಾ. ರಶ್ಮಿ .ಸಿ ಸುವರ್ಣ ಮಾತನಾಡಿ, ಆಧುನಿಕ ಆಹಾರ ಪದ್ಧತಿ ಹಾಗೂ ಆರೋಗ್ಯ ಶೈಲಿಯಿಂದಾಗಿ ಇಂದಿನ ಯುವತಿಯರ ದೇಹದಲ್ಲಿ ಹಾರ್ಮೋನ್‍ಗಳ ಏರುಪೇರಿನಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಅವುಗಳನ್ನು ಎಳವೆಯಲ್ಲಿಯೇ ಸರಿಪಡಿಸಬಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ಡಾ. ಪಿ. ಶಿವರಾಮ ವಹಿಸಿದ್ದರು, ಮಹಿಳಾ ವೇದಿಕೆ ಸಂಚಾಲಕ ಡಾ. ಶೈಲಾರಾಣಿ ಬಿ, ವೇದಿಕೆಯಲ್ಲಿ ಇದ್ದರು. ಸಹ ಸಂಚಾಲಕರಾದ ಡಾ. ಶರ್ಮಿಳಾ ರೈ ಮತ್ತು ಪ್ರೊ. ಗೀತಾ ಎಮ್. ಎಲ್ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ಕು. ಅಕ್ಷತ ಸ್ವಾಗತಿಸಿ, ಕು. ಪಲ್ಲವಿ ವಂದಿಸಿದರು.


Spread the love

Exit mobile version