Home Mangalorean News Kannada News ಹಾಸನ: ಮಾಧ್ಯಮಗಳು ವಸ್ತು ನಿಷ್ಠವಾಗಿ ಕೆಲಸ ನಿರ್ವಹಿಸಲು ಮುಖ್ಯ ಮಂತ್ರಿ ಸಲಹೆ

ಹಾಸನ: ಮಾಧ್ಯಮಗಳು ವಸ್ತು ನಿಷ್ಠವಾಗಿ ಕೆಲಸ ನಿರ್ವಹಿಸಲು ಮುಖ್ಯ ಮಂತ್ರಿ ಸಲಹೆ

Spread the love

ಹಾಸನ: ಮಾಧ್ಯಮಗಳು ವಸ್ತು ನಿಷ್ಠವಾಗಿ ಸ ತ್ಯವಾದ ವಿಚಾರಗಳನ್ನು ನೀಡುವ ಮೂಲಕ ಶಾಶ್ವತವಾಗಿ ಜನರ ಮನಸ್ಸಿನಲಿ ಉಳಿದಾಗ ಮೌಲ್ಯಯುತವಾದ ಸುದ್ದಿಯಾಗುತ್ತದೆ ಎಂದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ನಗರದ ಹಾಸನಾಂಬ ಕಲಾಭವನದಲ್ಲಿಂದು ಏರ್ಪಡಿಸಿದ್ದ 32 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತಿಚೇಗೆ ದೃಶ್ಯ ಮಾಧ್ಯಮಗಳಲ್ಲಿ ರಂಜಿತ ವಿಷಯಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಮೌಡ್ಯ ಮತ್ತು ಕಂದಚಾರ ವಿಷಯಗಳ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವುದ ಜೊತೆಗೆ ಜನರಲ್ಲಿ ವೈಚಾರಿಕತೆ ಮನೋಭಾವ ಬೆಳೆಸಬೇಕು ಎಂದರು.
ಸ್ವತಂತ್ಯ ಪೂರ್ವದಲ್ಲಿ ಪತ್ರಿಕೋಧ್ಯಮ ಒಂದು ಧರ್ಮವಾಗಿತ್ತು ಈಗ ಅದು ಉಧ್ಯಮವಾಗಿದೆ ಆಗ ಪತ್ರಿಕೆಗಳು ಜನರಲ್ಲಿ ಹೊರಾಟದ ಕಿಚ್ಚು ಹತ್ತಿಸುತ್ತಿದ್ದವು, ಸ್ವತಂತ್ರ್ಯ ನಂತರ ಅಭಿವೃದ್ಧಿಗೆ ಹೆಚ್ಚು ಒತ್ತು

ನೀಡುತ್ತಿದ್ದವು.ಮಾಧ್ಯಮಗಳ ಮೇಲೆ ಅಪಾರವಾದ ನಂಬಿಕೆ ಮತ್ತು ವಿಶ್ವಾಸವಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಮಹತ್ತರ ಪಾತ್ರವಹಿಸುತ್ತವೆ. ಊಹಾಪೋಹಗಳನ್ನು ಹರಿಬಿಡುವ ಕೆಲಸವನ್ನು ಸುದ್ದಿಮಾಧ್ಯಮಗಳು ಕ್ಕೆ ಬಿಟ್ಟು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಹ ಕಾರ್ಯಮಾಡಬೇಕು ಎಂದು ಮುಖ್ಯ ಮಂತ್ರಿಯವರು ಹೇಳಿದರಲ್ಲದೆ, ಮಾಧ್ಯಮಗಳು ಆರೋಗ್ಯಕರವಾದ ಬೆಳವಣಿಗೆ ಮೂಲಕ ಜನರ ವಿಶ್ವಾಸಗಳಿಸುವುದು ಅತ್ಯಂತ ಅವಶ್ಯ ಎಂದರು.

ಸಣ್ಣ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಕೆಸದ ಭದ್ರತೆಯಿಲ್ಲದೆ ಅನಿಶ್ಚತೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಭದ್ರತೆ ಬೇಕಾಗಿದೆ ಈ ನಿಟ್ಟಿನಲ್ಲಿ ಸರ್ಕಾರ, ಪತ್ರಕರ್ತರು ಹಾಗೂ ಮಾಲೀಕರು ಚಿಂತನೆ ನಡೆಸಬೇಕಾಗಿದೆ ಎಂದರು. ತಮ್ಮ ಸರ್ಕಾರ ನಿವೃತ್ತರಾದ ಪತ್ರಕರ್ತರಿಗೆ ಇದ್ದಂತಹ ಮಾಸಾಶನ ಸೌಲಭ್ಯವನ್ನು 3 ಸಾವಿರದಿಂದ 6 ಸಾವಿರಕ್ಕೆ ಏರಿಸಿದೆ ಎಂದರಲ್ಲದೆ, ಪತ್ರಕರ್ತರಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದು ಮಾನ್ಯ ಮುಖ್ಯ ಮಂತ್ರಿಯವರು ತಿಳಿಸಿದರು.

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಹಾಸನ ಪತ್ರಿಕಾ ಭವನದ ಅಭಿವೃದ್ದಿ ಕಾಮಗಾರಿಗೆ 25 ಲಕ್ಷ ರೂ ಸೇರಿದಂತೆ ಪತ್ರಿಕಾ ಕ್ಷೇತ್ರದ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು “ಕರ್ನಾಟಕ ಪತ್ರಕರ್ತ” ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ ಪತ್ರಕರ್ತ ಮಿತ್ರರು ಸಮಾಜದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿದ್ದಾರೆ. ಅದೇ ರೀತಿ ಯಾವ ರೀತಿ ಪರಿಹಾರ ಮಾಡಬಹುದು ಎಂಬುದನ್ನು ಕುರಿತು ಸಲಹೆ ನೀಡಿದರೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದರು.

ದೇಶದಲ್ಲಿಯೇ ಮಾದರಿಯಾದಂತಹ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು. ಭಾರತ ದೇಶದ ಆಚಾರ ವಿಚಾರ ಬಹಳ ಚೆನ್ನಾಗಿದೆ ಯುವ ಜನತೆ ಕೆಲಸಕ್ಕಾಗಿ ವಿದೇಶಗಳಿಗೆ ಹೋಗುವ ಬದಲು ನಮ್ಮ ದೇಶದಲ್ಲಿದ್ದು ಸೇವೆ ಸಲ್ಲಿಸಬೇಕು ಎಂದರು.

ಪ್ರತಿಯೊಬ್ಬ ಮನುಷ್ಯನಿಗೂ ಒಂದಿಲ್ಲೊಂದು ಸಮಸ್ಯೆ ಇರುತ್ತದೆ ಅದನೇ ಬಹು ಮುಖ್ಯವಾಗಿ ಪರಿಗಣಿಸದೆ ಸಕಾರಾತ್ಮಕವಾಗಿ ಕೆಲಸ ಮಾಡಬೇಕು ಎಂದರಲ್ಲದೆ, ಆತ್ಮವಿಶ್ವಾಸದಿಂದ ಕೆಲಸ ಮಾಡುವ ಶಕ್ತಿ ಪತ್ರಕರ್ತರಿಗೆ ದೊರೆಯಲಿ ಎಂದು ಶುಭ ಹಾರೈಸಿದರು.

ಶಾಸಕರಾದ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಸರ್ಕಾರ ಸಣ್ಣ ಪತ್ರಿಕೆಗಳ ಕಷ್ಟಗಳಿಗೆ ಸ್ಪಂದಿಸಬೇಕು ಎಂದರಲ್ಲದೆ, ಜಿಲ್ಲಾ ಮಟ್ಟದ ಪತ್ರಿಕೆಗಳ ಪತ್ರಕರ್ತರಿಗೆ ಮನೆ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಅವರು ಮಾತನಾಡಿ ಪತ್ರಿಕೆಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿವೆ ಆದರೆ ಅವುಗಳ ಧ್ವನಿ ಕೇಳಿಸುತ್ತಿಲ್ಲ ಸಪ್ಪೆಯಾಗಿದೆ ಎಂದರು. ಪತ್ರಿಕೆಗಳು ಸಕ್ರೀಯವಾಗಿ ಕೆಲಸ ಮಾಡುವುದರ ಜೊತೆಗೆ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ನ್ಯಾಯಾ ದೊರೆಕಿಸುವ ಮೂಲಕ ಪತ್ರಿಕೆಗಳು ಪ್ರಜ್ವಲವಾಗಬೇಕು ಎಂದು ತಿಳಿಸಿದರು.

ಕಾರ್ಯನಿತರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಎನ್.ರಾಜು ಅವರು ಮಾತನಾಡಿ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಸಕಾರ್Àರದಿಂದ ಅಗತ್ಯವಿರುವ ಬೇಡಿಕೆಗಳನ್ನು ಮಂಡಿಸಿದರು. ಸರ್ಕಾರದಿಂದ ಪತ್ರಿಕಾ ದಿನಾಚರಣೆ ಮಾಡುವ ಬಗ್ಗೆಯೂ ಒತ್ತಾಯಿಸಿದರು.

ಭಾರತೀಯ ಬಾಹ್ಯಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಎ.ಎಸ್.ಕಿರಣ್ ಕುಮಾರ್ ಅವರು ಮಾತನಾಡಿ ತಂತ್ರಜ್ಞಾನದಲ್ಲಿ ನಿರಂತರವಾಗಿ ಅವಿಷ್ಕಾರ ನಡೆಯುತ್ತಿದ್ದು, ಜೀವನದಲ್ಲಿ ಅವಶ್ಯಕತೆಗೆ ತಕ್ಕಂತೆ ಬದಲಾವಣೆಗೆ ಬಳಸಿಕೊಂಡು ಮುನ್ನೆಡೆಯ ಬೇಕಾಗಿದೆ ಎಂದರಲ್ಲದೆ, ಮಾಧ್ಯಮ ರಂದಗಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಕರ್ತವ್ಯ ನಿಭಾಯಿಸುವಂತೆ ತಿಳಿಸಿದರು.

ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ತಿಮ್ಮಪ್ಪ ಭಟ್ ಅವರು ಮಾತನಾಡಿ ನಮ್ಮ ಪತ್ರಿಕೆಯ ಹೂರಣಗಳ ಮೂಲಕ ಜನರನ್ನು ಆಕರ್ಷಿಸುವ ಸವಾಲು ನಮ್ಮ ಮುಂದೆ ಇದೆ. ಓದುಗರನ್ನು ಆಕರ್ಷಿಸುವ ಹಬ್ಬರದಲ್ಲಿ ವಿವೇಕ ಕಳೆದುಕೊಳ್ಳುತ್ತಿದ್ದೆವೆ ಎನ್ನು ಪ್ರಶ್ನೆ ಮನೆಮಾಡಿ ಎಂದರಲ್ಲದೆ, ಸಾಮಾಜಿಕ ಕಳಕಳಿಯಿಂದ ಹೊಂದೆ ಸರಿದ್ದಿದ್ದೆವೆ ಏನಿ ಪ್ರಶ್ನೆ ನಮ್ಮ ಮುಂದೆ ಇದೆ ಎಂದರು.
ಪ್ರಜಾಪ್ರಭ್ಯತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ಜನರ ವಿಶ್ವಾಸಗಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಚಿಂತಿಸಬೆಕಾಗಿದೆ ಎಂದರು.

ರಾಜ್ಯ ಲೋಕೋಪಯೋಗಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ:ಹೆಚ್.ಸಿ.ಮಹದೇವಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ರೋಷನ್ ಬೇಗ್, ಶಾಸಕರಾದ ಎ.ಮಂಜು, ಹೆಚ್.ಎಸ್.ಪ್ರಕಾಶ್, ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಂ.ರೇವಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿದೇಶಕರಾದ ಎನ್.ಆರ್.ವಿಶುಕುಮಾರ್, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ವಿಕ್ರಂ ರಾವ್,ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರಾದ ಎಸ್.ಎಂ.ಆನಂದ್, ಸಿ.ವಿ.ರಾಜಪ್ಪ,ಎಸ್.ವಿ.ಜಯಶೀಲರಾವ್, ಎನ್.ಅರ್ಜುನದೇವ, ಬಿ.ವಿ.ಮಲ್ಲಿಕಾರ್ಜುನಯ್ಯ, ಜಿ.ಕೆ.ಸತ್ಯ, ಗುಡಿಹಳ್ಳಿ ನಾಗರಾಜು, ವಿ.ವೆಂಕಟೇಶ್, ಹೆಚ್.ಎಸ್.ಸುಧೀಂದ್ರಕುಮಾರ್, ಗಂಗಾಧರ್ ಮೊದಲಿಯಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಶಿವಾನಂದ ತಗಡೂರು, ಲೋಟಸ್ ಟಿ.ವಿ.ಸುದ್ದಿ ವಾಚಕಿ ಪದ್ಮಿನಿ ಪ್ರಸಾದ್, ಜಿಲ್ಲಾಧಿಕಾರಿ ಉಮೇಶ್ ಹೆಚ್.ಕುಸಗಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version