ಚಿತ್ರದುರ್ಗದಲ್ಲಿ ನಟ ಶಿವರಾಜ್ಕುಮಾರ್ ಜಸ್ಟ್ ಮಿಸ್: ಪವರ್ ಫ್ಲ್ಯಾಟ್ ಬ್ಲಾಸ್ಟ್
ಚಿತ್ರದುರ್ಗ: ನಟ ಡಾ. ಶಿವರಾಜ್ಕುಮಾರ್ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.
‘ಬೇಲ್’ ಸಿನಿಮಾ ಪ್ರಮೋಶನ್ಗಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಶಿವರಾಜ್ಕುಮಾರ್ ಅವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ನಗರದ ಖಾಸಗಿ ಶೋ ರೂಂನಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿದೆ.
ಬ್ಲಾಸ್ಟ್ನಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಟ ಶಿವರಾಜ್ಕುಮಾರ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ.
