Home Mangalorean News Kannada News ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ ; ಆರೋಪಿಗಳ ಫೋಟೊ ಬಿಡುಗಡೆ, ಪತ್ತೆಗೆ ಸಹಕಾರ ಕೋರಿದ ಮಂಗಳೂರು...

ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ ; ಆರೋಪಿಗಳ ಫೋಟೊ ಬಿಡುಗಡೆ, ಪತ್ತೆಗೆ ಸಹಕಾರ ಕೋರಿದ ಮಂಗಳೂರು ಪೊಲೀಸರು

Spread the love

ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ ; ಆರೋಪಿಗಳ ಫೋಟೊ ಬಿಡುಗಡೆ, ಪತ್ತೆಗೆ ಸಹಕಾರ ಕೋರಿದ ಮಂಗಳೂರು ಪೊಲೀಸರು

ಮಂಗಳೂರು: ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿದ್ದು ಬಂಧನಕ್ಕಾಗಿ   ಬಲೆ ಬೀಸಿದ್ದಾರೆ. ಇದೇ ವೇಳೆ, ಕೃತ್ಯದಲ್ಲಿ ಭಾಗಿಯಾದ ನಟೋರಿಯಸ್ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ್ದು ಇವರ ಪತ್ತೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.

ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ದರೋಡೆ ಪ್ರಕರಣದ  ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದ ಶ್ರೀರಾಗ್, ಅತುಲ್, ಮಿಥುನ್ಲಾಲ್, ಅಜೀರ್ ತರಾಯಿಲ್, ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಕೊಡಗಿನ ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್, ಜಮೀರ್ ಅಲಿಕಾ ಎಂಬವರು ಆರೋಪಿಗಳು ಎಂದು ಗುರುತಿಸಲಾಗಿದೆ.

ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಾರಣ ಆರೋಪಿಗಳ ಬಂಧನಕ್ಕೆ ಸಹರಿಸುವಂತೆ ಮಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಅವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ಈ ಮೇಲ್ಕಾಣಿಸಿದ ತಲೆಮರೆಸಿಕೊಂಡ ಆರೋಪಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಫೋನ್ ನಂಬರಿಗೆ ನೀಡುವುದು.
1. ಪೊಲೀಸ್ ಇನ್ಸ್ಪೆಕ ್ಟರ್, ಪಣಂಬೂರು ಪೊಲೀಸ್ ಠಾಣೆ ಮೊ: 9480805331
2. ಪೊಲೀಸ್ ಉಪನಿರೀಕ್ಷಕರು ಪಣಂಬೂರು ಪೊಲೀಸ್ ಠಾಣೆ ಮೋ: 9480805355
3. ಪಣಂಬೂರು ಪೊಲೀಸ್ ಠಾಣೆ, ಪಣಂಬೂರು, ಮಂಗಳೂರು ಚಿಫೋನ್: 0824-2220530
4. ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ಮೊ: 9480802300, ಫೋನ್:0824-2222800

ಜೂನ್ 29 ರ ನಸುಕಿನಲ್ಲಿ ಮಂಗಳೂರಿನ ಬೈಕಂಪಾಡಿ ಬಳಿಯ ಹೆದ್ದಾರಿ ಮಧ್ಯೆ ಕಾರಿನಲ್ಲಿ ಬರುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಸಹಕರಿಸಿದ ಮೂವರನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲಕ್ಕೇರಿ ಮೂಲದ ನಿಮಿಲ್, ಮಡಿಕೇರಿ ಮೂಲದ ಇರ್ಷಾದ್ ಮತ್ತು ಮುಸ್ತಾಫ ಎಂಬವರನ್ನು ಬಂಧಿಸಿದ್ದರು. ಕಾರಿನಲ್ಲಿ ಬರುತ್ತಿದ್ದ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಮೇಲೆ ಹಲ್ಲೆಗೈದು 180 ಗ್ರಾಂ ಚಿನ್ನ ಸಹಿತ 23 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದರು.


Spread the love

Exit mobile version