Home Mangalorean News Kannada News ಉಡುಪಿಯಲ್ಲಿ ಭವ್ಯ ‘ಶ್ರೀ ಮಹಾಧನ್ವಂತರಿ ಯಾಗ’ ಸಂಪನ್ನ 

ಉಡುಪಿಯಲ್ಲಿ ಭವ್ಯ ‘ಶ್ರೀ ಮಹಾಧನ್ವಂತರಿ ಯಾಗ’ ಸಂಪನ್ನ 

Spread the love

ಉಡುಪಿಯಲ್ಲಿ ಭವ್ಯ ‘ಶ್ರೀ ಮಹಾಧನ್ವಂತರಿ ಯಾಗ’ ಸಂಪನ್ನ 

ಆರೋಗ್ಯವಂತ, ಸುರಕ್ಷಿತ ಭಾರತದ ಸಂಕಲ್ಪದೊಂದಿಗೆ ಧಾರ್ಮಿಕ ಕಾರ್ಯಕ್ರಮ | ಸಾವಿರ ವರ್ಷಗಳ ಇತಿಹಾಸವುಳ್ಳ ಸೊರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳ ಅಪರೂಪದ ದರ್ಶನ

ಉಡುಪಿ: ಜಾಗತಿಕ ಅಶಾಂತಿ, ಯುದ್ಧದ ಕಾರ್ಮೋಡ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸಾಂಕ್ರಾಮಿಕ ರೋಗಗಳಂತಹ ವಿವಿಧ ಆಪತ್ತುಗಳ ಹಿನ್ನೆಲೆಯಲ್ಲಿ ಸಮಸ್ತ ಮಾನವಕುಲದ ಆರೋಗ್ಯ, ಆಯುಷ್ಯ, ಕ್ಷೇಮ ಹಾಗೂ ರಾಷ್ಟ್ರದ ಸುರಕ್ಷತೆಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಉಡುಪಿಯ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಶ್ರೀ ಮಹಾಧನ್ವಂತರಿ ಯಾಗ’ವು ಭಕ್ತಿಪೂರ್ಣ ಹಾಗೂ ಚೈತನ್ಯಮಯ ವಾತಾವರಣದಲ್ಲಿ ಸಂಪನ್ನಗೊಂಡಿತು.

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಸಂಕಲ್ಪದಂತೆ ನಡೆದ ಈ ಯಾಗದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು, ಧರ್ಮಾಭಿಮಾನಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಈ ಮೂಲಕ ಉಡುಪಿಯ ಧಾರ್ಮಿಕ ಇತಿಹಾಸದಲ್ಲಿ ಸ್ಮರಣೀಯ ಆಧ್ಯಾತ್ಮಿಕ ಕಾರ್ಯಕ್ರಮವಾಗಿ ಮೂಡಿಬಂದಿತು.

ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸಂತ ಸದ್ಗುರು ನೀಲೇಶ ಸಿಂಗಬಾಳ ಹಾಗೂ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂ. ರಮಾನಂದ ಗೌಡ ಅವರ ದಿವ್ಯ ಸಾನ್ನಿಧ್ಯದಲ್ಲಿ ದೀಪಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಪೂ. ರಮಾನಂದ ಗೌಡ ಅವರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರನ್ನು ಸತ್ಕರಿಸಿದರು.

ಯಾಗದಲ್ಲಿ ಸನಾತನ ಸಂಸ್ಥೆಯ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಮತ್ತು ಸದ್ಗುರು (ಡಾ.) ಮುಕುಲ ಗಾಡಗೀಳ ಅವರು ಮುಖ್ಯ ಯಜಮಾನರಾಗಿ ಉಪಸ್ಥಿತರಿದ್ದರು.

ಮಧ್ಯಾಹ್ನ 3 ಗಂಟೆಗೆ ಶಂಖನಾದ, ಕುಂಕುಮಾರ್ಚನೆ ಹಾಗೂ ಪುಣ್ಯಾಹವಾಚನದೊಂದಿಗೆ ಪ್ರಧಾನ ಮಹಾಧನ್ವಂತರಿ ಯಾಗಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಯಿತು. ಮುಖ್ಯ ಆಚಾರ್ಯರಾದ ಅರುಣಕುಮಾರ್ ಗುರುಮೂರ್ತಿ ಹಾಗೂ ವೈದಿಕ ವಿದ್ವಾಂಸರ ತಂಡ ವೇದಮಂತ್ರಗಳ ಘೋಷದೊಂದಿಗೆ ಯಾಗದ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು. ಸಂಜೆ 7 ಗಂಟೆಗೆ ಮಹಾಪೂರ್ಣಾಹುತಿ ಹಾಗೂ ಮಹಾಮಂಗಳಾರತಿಯೊಂದಿಗೆ ಯಾಗ ಸಂಪನ್ನಗೊಂಡಿತು.

ಯಾಗ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಯಾಗ ಸ್ಥಳಕ್ಕೆ ಭೇಟಿ ನೀಡಿದರು. ಭಾರತದ ರಕ್ಷಣೆ ಹಾಗೂ ಪ್ರತಿಯೊಬ್ಬ ನಾಗರಿಕರ ಆರೋಗ್ಯ, ಶಾಂತಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಉಡುಪಿಯಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀ ಮಹಾಧನ್ವಂತರಿ ಯಾಗವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ದೇಶದ ಒಳಿತಿಗಾಗಿ ಸನಾತನ ಸಂಸ್ಥೆಯು ಹಲವು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವುದು ಸ್ಮರಣೀಯ ಎಂದು ಅವರು ಹೇಳಿದರು.

ಸೊರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳ ಅಪರೂಪದ ದರ್ಶನ
ಯಾಗದ ಪ್ರಮುಖ ಆಕರ್ಷಣೆಯಾಗಿ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸೊರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳ ಅಪರೂಪದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಆಕ್ರಮಣಕಾರ ಮಹಮ್ಮದ್ ಗಜ್ನಿ ಸೋಮನಾಥ ಜ್ಯೋತಿರ್ಲಿಂಗವನ್ನು ಧ್ವಂಸಗೊಳಿಸಿದ್ದನು. ಅಂದಿನಿಂದ ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ಸಂರಕ್ಷಿಸಿಕೊಂಡು ಬಂದಿರುವ ಈ ಪವಿತ್ರ ಜ್ಯೋತಿರ್ಲಿಂಗದ ದಿವ್ಯಾಂಶಗಳನ್ನು ಯಾಗದಲ್ಲಿ ಭಕ್ತರ ದರ್ಶನಕ್ಕಾಗಿ ಇರಿಸಲಾಗಿತ್ತು. ಸಾಂಪ್ರದಾಯಿಕ ಮಂಗಳವಾದ್ಯಗಳೊಂದಿಗೆ ಪವಿತ್ರ ದಿವ್ಯಾಂಶಗಳನ್ನು ಯಾಗ ಸ್ಥಳಕ್ಕೆ ತರಲಾಯಿತು.

ಒಂದೆಡೆ ಮಹಾಧನ್ವಂತರಿ ಯಾಗದ ಮೂಲಕ ಭಗವಾನ್ ಶ್ರೀವಿಷ್ಣುವಿನ ಆರಾಧನೆ ನಡೆದರೆ, ಮತ್ತೊಂದೆಡೆ ಭಗವಾನ್ ಶಿವನ ಸೊರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹರಿಹರರ ಉಪಾಸನೆಯ ಈ ಅಪೂರ್ವ ಆಧ್ಯಾತ್ಮಿಕ ಸಂಗಮ ಸಾವಿರಾರು ಭಕ್ತರನ್ನು ಭಾವಪರವಶಗೊಳಿಸಿತು.
ಸಂತರು, ಗಣ್ಯರ ಉಪಸ್ಥಿತಿ
ಈ ಭವ್ಯ ಧಾರ್ಮಿಕ ಸಮಾರಂಭದಲ್ಲಿ ಅದಮಾರು ಮಠದ ಕಿರಿಯ ಶ್ರೀಗಳು, ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಂತರು, ಶಾಸಕರು, ಜನಪ್ರತಿನಿಧಿಗಳು, ಉದ್ಯಮಿಗಳು, ವೈದ್ಯಕೀಯ ಕ್ಷೇತ್ರದ ಗಣ್ಯರು, ಧಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದರು.

15ಕ್ಕೂ ಅಧಿಕ ವೈಶಿಷ್ಟ್ಯಪೂರ್ಣ ಪ್ರದರ್ಶನ ಮಳಿಗೆಗಳು
ಯಾಗದ ಅಂಗವಾಗಿ 15ಕ್ಕೂ ಅಧಿಕ ವೈಶಿಷ್ಟ್ಯಪೂರ್ಣ ಪ್ರದರ್ಶನ ಮಳಿಗೆಗಳನ್ನು ಸಜ್ಜುಗೊಳಿಸಲಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಜೀವನದರ್ಶನ, ಸನಾತನ ಸಂಸ್ಥೆಯ ಗ್ರಂಥಗಳು, ‘ಸನಾತನ ಪ್ರಭಾತ’ ನಿಯತಕಾಲಿಕೆಗಳು, ಅಗ್ನಿಹೋತ್ರ, ಸಾತ್ತ್ವಿಕ ಉತ್ಪನ್ನಗಳು, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮಿಕ ಉಪಾಯಗಳು, ಗುರುಕೃಪಾಯೋಗ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಧರ್ಮಶಿಕ್ಷಣಕ್ಕೆ ಸಂಬಂಧಿಸಿದ ಮಳಿಗೆಗಳು ಗಮನ ಸೆಳೆದವು.

ಆಪತ್ಕಾಲದಲ್ಲಿ ಉಪಯುಕ್ತವಾಗುವ ಆಯುರ್ವೇದ ಔಷಧಗಳು, ಔಷಧೀಯ ಸಸ್ಯಗಳು ಹಾಗೂ ಧರ್ಮಾಚರಣೆಯ ಮಹತ್ವವನ್ನು ತಿಳಿಸುವ ಮಾಹಿತಿ ಫಲಕಗಳು ಜಿಜ್ಞಾಸುಗಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು.

ಭಕ್ತರಿಗೆ ಸುಸಜ್ಜಿತ ವ್ಯವಸ್ಥೆ
ದೂರದ ಊರುಗಳಿಂದ ಆಗಮಿಸಿದ ಭಕ್ತರಿಗೆ ಸ್ವಾಗತ, ಮಾರ್ಗದರ್ಶನ, ಆಸನ ವ್ಯವಸ್ಥೆ, ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು. ಸನಾತನ ಸಂಸ್ಥೆಯ ಸಾಧಕರು ಮತ್ತು ಸ್ವಯಂಸೇವಕರು ಸೇವಾಭಾವದಿಂದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version