Home Mangalorean News Kannada News ಕಮಲಶಿಲೆ: ದೇವಸ್ಥಾನದ ಅರ್ಚಕರಿಗೆ ₹73 ಲಕ್ಷ, ಚಿನ್ನ-ಬೆಳ್ಳಿ ವಂಚಿಸಿದ ನಕಲಿ ವಕೀಲ; ಎಫ್‌ಐಆರ್ ದಾಖಲು

ಕಮಲಶಿಲೆ: ದೇವಸ್ಥಾನದ ಅರ್ಚಕರಿಗೆ ₹73 ಲಕ್ಷ, ಚಿನ್ನ-ಬೆಳ್ಳಿ ವಂಚಿಸಿದ ನಕಲಿ ವಕೀಲ; ಎಫ್‌ಐಆರ್ ದಾಖಲು

Spread the love

ಕಮಲಶಿಲೆ: ದೇವಸ್ಥಾನದ ಅರ್ಚಕರಿಗೆ ₹73 ಲಕ್ಷ, ಚಿನ್ನ-ಬೆಳ್ಳಿ ವಂಚಿಸಿದ ನಕಲಿ ವಕೀಲ; ಎಫ್‌ಐಆರ್ ದಾಖಲು

ಕುಂದಾಪುರ: ತಾನು ವಕೀಲನೆಂದು ಸುಳ್ಳು ಹೇಳಿ, ಕೌಟುಂಬಿಕ ಕಲಹವನ್ನು ಇತ್ಯರ್ಥಪಡಿಸಿಕೊಡುವುದಾಗಿ ನಂಬಿಸಿ ಕಮಲಶಿಲೆ ದೇವಸ್ಥಾನದ ಅರ್ಚಕರಿಂದ ಹಂತ-ಹಂತವಾಗಿ ಸುಮಾರು ₹73 ಲಕ್ಷ ನಗದು, 160 ಗ್ರಾಂ ಚಿನ್ನ ಹಾಗೂ 1.5 ಕೆ.ಜಿ ಬೆಳ್ಳಿ ಪಡೆದು ವಂಚಿಸಿ ಜೀವಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಕಮಲಶಿಲೆ ಗ್ರಾಮದ ತಟ್ಟೆಗುಳಿ ನಿವಾಸಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಪ್ರವೀಣ್ ಅಡಿಗ (34) ಅವರು ನೀಡಿದ ದೂರಿನ ಮೇರೆಗೆ, ಭಾರ್ಗವ ವಿಜಯ್ ಅಲಿಯಾಸ್ ವೀರ ರಾಘವನ್ ಎಂಬಾತನ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ದೂರುದಾರ ಪ್ರವೀಣ್ ಅಡಿಗ ಅವರಿಗೆ 2025ರ ಜುಲೈ 7ರಂದು ಪರಿಚಯವಾಗಿದ್ದ ಆರೋಪಿಯು, ತಾನು ವಕೀಲನೆಂದು ಹೇಳಿಕೊಂಡಿದ್ದನು. ಅರ್ಚಕರು ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಆತನ ಬಳಿ ಹೇಳಿಕೊಂಡಾಗ, ಆತ ಅವರ ಪತ್ನಿಯ ಮನೆಗೆ ಕರೆದುಕೊಂಡು ಹೋಗಿ ರಾಜಿ ಸಂಧಾನಕ್ಕೆ ಯತ್ನಿಸಿದ್ದ. ಮರುದಿನ (ಜುಲೈ 8, 2025) ಆರೋಪಿಯು ಅರ್ಚಕರಿಂದ ನಗದಾಗಿ ₹6,61,000 ಪಡೆದುಕೊಂಡಿದ್ದ. ಅಲ್ಲದೆ, ಪತ್ನಿಯ ಬಳಿ ಇದ್ದ ಎರಡು ವರ್ಷದ ಮಗಳನ್ನು ಅರ್ಚಕರಿಗೆ ಕೊಡಿಸುವುದಾಗಿ ಭರವಸೆ ನೀಡಿ, ನಕಲಿ ದಾಖಲೆಗಳನ್ನು ತೋರಿಸಿ ಖಾಲಿ ಛಾಪಾ ಕಾಗದಗಳಿಗೆ (ಠಸೆ ಪತ್ರ) ಸಹಿ ಪಡೆದುಕೊಂಡಿದ್ದನು.

ನ್ಯಾಯಾಲಯ, ಪೊಲೀಸರ ಹೆಸರಿನಲ್ಲಿ ಹಣ ವಸೂಲಿ:

ಬಳಿಕ ಆರೋಪಿಯು ಹೈಕೋರ್ಟ್ ಮತ್ತು ಬ್ಯಾಂಕ್‌ಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ, ‘ನ್ಯಾಯಾಧೀಶರಿಗೆ, ಪತ್ನಿಯ ವಕೀಲರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನೀಡಬೇಕು’ ಎಂದು ನಂಬಿಸಿ ಆನ್‌ಲೈನ್ ಮತ್ತು ನಗದು ರೂಪದಲ್ಲಿ ಅರ್ಚಕರು, ಅವರ ಅಕ್ಕ ಹಾಗೂ ಭಾವನಿಂದ ಸುಮಾರು ₹50 ಲಕ್ಷಕ್ಕೂ ಅಧಿಕ ಹಣವನ್ನು ಹಂತ-ಹಂತವಾಗಿ ಪಡೆದುಕೊಂಡಿದ್ದ.

ಅಷ್ಟಕ್ಕೇ ನಿಲ್ಲದೆ, ಅರ್ಚಕರ ಮನೆಗೆ ತೆರಳಿ, “ನಿಮ್ಮ ಪತ್ನಿ ವರದಕ್ಷಿಣೆ ಕೇಸ್ ಹಾಕಿದ್ದಾರೆ, ಅವರ ಚಿನ್ನ ಮತ್ತು ಮನೆಯವರ ಚಿನ್ನವನ್ನು ಕೋರ್ಟ್‌ಗೆ ಜಮೆ ಮಾಡಬೇಕು” ಎಂದು ನಂಬಿಸಿ, ಮನೆಯವರ ಸುಮಾರು 160 ಗ್ರಾಂ ಚಿನ್ನಾಭರಣ ಹಾಗೂ 1.5 ಕೆ.ಜಿ ಬೆಳ್ಳಿಯನ್ನೂ ಕೊಂಡೊಯ್ದಿದ್ದನು. ಮಗಳನ್ನು ಒಪ್ಪಿಸಲು ಗ್ಯಾರಂಟಿ ಬೇಕು ಎಂದು ಹೇಳಿ 10 ಖಾಲಿ ಚೆಕ್‌ಗಳಿಗೂ ಸಹಿ ಪಡೆದಿದ್ದ.

ನ್ಯಾಯಾಲಯದಲ್ಲಿ ಪತಿಯ ಸುಳ್ಳು ವಾದ ಮತ್ತು ನಿಲುವು: “ಚಿನ್ನ-ಬೆಳ್ಳಿ ನನ್ನ ಬಳಿ ಇಲ್ಲ”

ಇನ್ನೊಂದೆಡೆ, ಅರ್ಚಕ ಪ್ರವೀಣ್, ಅವರು ತನ್ನ ಪತ್ನಿ ಹಾಗೂ ಅವರ ಎರಡು ವರ್ಷದ ಮಗುವನ್ನು ಮನೆಯಿಂದ ಹೊರಹಾಕಿ/ಬೇರ್ಪಡಿಸಿ, ಪತ್ನಿಗೆ ಸೇರಿದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದು, ಉಡುಪಿಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪತ್ನಿ ದಾಖಲಿಸಿರುವ ವೈವಾಹಿಕ ಪ್ರಕರಣದಲ್ಲಿ ಪತಿ ಪ್ರವೀಣ್ ಅಡಿಗ, “ತಮ್ಮ ಮನೆಯಲ್ಲಿ ಪತ್ನಿಗೆ ಸೇರಿದ ಯಾವುದೇ ಚಿನ್ನಾಭರಣ ಅಥವಾ ಬೆಳ್ಳಿ ಸಾಮಗ್ರಿಗಳು ಇಲ್ಲ” ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿ ಆಭರಣಗಳನ್ನು ಹಾಜರುಪಡಿಸಬೇಕೆಂದು ಹಿಂದಿನ ವಕೀಲರು/ವ್ಯಕ್ತಿಗಳು ನಂಬಿಸಿದ್ದರಿಂದ, ಪತ್ನಿ ಹಾಗೂ ತನಗೆ ಸೇರಿದ ಚಿನ್ನ-ಬೆಳ್ಳಿಯನ್ನು ಅವರ ಕೈಗೊಪ್ಪಿಸಿದ್ದೆ; ಆದರೆ ಅದು ವಂಚನೆ ಎಂಬುದು ನಂತರ ಗೊತ್ತಾಯಿತು. ಹಾಗಾಗಿ ತಮ್ಮ ಮನೆಯಲ್ಲಿ ಯಾವುದೇ ಆಭರಣಗಳು ಲಭ್ಯವಿಲ್ಲದಿರುವುದರಿಂದ ಕೋರ್ಟ್ ಕಮಿಷನರ್ ತಪಾಸಣೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಮೂಲಕ ಪತ್ನಿಯ ಆಭರಣಗಳು ತಮ್ಮ ಬಳಿ ಇಲ್ಲವೆಂದು ಹೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲಕಾರಿ ತಿರುವು ನೀಡಿದೆ.

ಬೆಳಕಿಗೆ ಬಂದ ವಂಚನೆ, ಜೀವಬೆದರಿಕೆ:

ಪ್ರವೀಣ್ ಅಡಿಗ ಅವರ ಪತ್ನಿ ನ್ಯಾಯಾಲಯದಲ್ಲಿ ಪ್ರಕರಣ (MC 28/2025) ದಾಖಲಿಸಿದ ನಂತರ, ಅರ್ಚಕರು ಕೋರ್ಟ್ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಯು ಯಾವುದೇ ಹಣ ಅಥವಾ ಚಿನ್ನ-ಬೆಳ್ಳಿಯನ್ನು ನ್ಯಾಯಾಲಯಕ್ಕೆ ಜಮೆ ಮಾಡದಿರುವುದು ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಲು ಫೋನ್ ಮಾಡಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ಖಾಲಿ ಚೆಕ್‌ಗಳ ಮೂಲಕ ನಿಮ್ಮ ಮತ್ತು ನಿಮ್ಮ ಅಕ್ಕನ ಮೇಲೆ ಚೆಕ್ ಬೌನ್ಸ್ ಕೇಸ್ ಹಾಕುತ್ತೇನೆ’ ಎಂದು ಬೆದರಿಸಿದ್ದಲ್ಲದೆ, ಕಾನೂನು ಕ್ರಮ ಕೈಗೊಂಡರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದಾನೆ.

ಒಟ್ಟಾರೆಯಾಗಿ ವಕೀಲನೆಂದು ನಂಬಿಸಿ ₹73 ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣ ಪಡೆದು ನಂಬಿಕೆ ದ್ರೋಹ ಎಸಗಿರುವ ಆರೋಪದಡಿ ಶಂಕರನಾರಾಯಣ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version