ಪರ್ಯಾಯ ಮಿಸ್ಟರ್ 2026 ಕ್ಲಾಸಿಕ್ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ ಉದ್ಘಾಟನೆ
ಉಡುಪಿ: ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ವತಿಯಿಂದ ಶಿರೂರು ಪರ್ಯಾಯ ಮಹೋತ್ಸವದ ಪ್ರಯುಕ್ತ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಪರ್ಯಾಯ ಮಿಸ್ಟರ್ 2026 ಕ್ಲಾಸಿಕ್ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಇಲ್ಲಿನ ಶೋಕಮಾತಾ ಚರ್ಚ್ ಆವರಣದಲ್ಲಿ ನಡೆಯಿತು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿ ಮಾತನಾಡಿ ಯುವಕರು ಮಾದಕ ದ್ರವ್ಯವನ್ನು ತೊರೆದು ಉತ್ತಮ ಆರೋಗ್ಯ ರೂಪಿಸಿಕೊಳ್ಳಬೇಕು. ತುಳುನಾಡು ಮಹಾಮಲ್ಲರನ್ನು ಪಡೆದ ಕ್ಷೇತ್ರವಾಗಿದೆ. ಆ ಪರಂಪರೆಯನ್ನು ಉಳಿಸುವ ಕೆಲಸವಾಗಬೇಕು ಎಂದರು.
ಉಡುಪಿ ಶೋಕಮಾತನಾಡಿ ಚರ್ಚ್ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್ ಮಾತನಾಡಿ ಉಡುಪಿ ಸರ್ವ ಧರ್ಮ ಬಾಂಧವರ ಒಕ್ಕೂಟದ ಹಬ್ಬವಾಗಿದೆ. ಉಡುಪಿಯಂತಹ ಬಾಂಧವ್ಯ ಬೇರೆಡೆ ಸಿಗುವುದು ಕಡಿಮೆ. ಈ ಭಾಂಧವ್ಯ ಉಳಿಸಿ ಬೆಳೆಸುವ ಕೆಲಸವಾಗಿ ಎಂದರು.
ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಉಡುಪಿಯಲ್ಲಿ ಯುವಜನರಿಗೆ ಕ್ರೀಡೆಗೆ ಪ್ರೋತ್ಸಾಹ ಸಿಗಬೇಕು. ಆ ಮೂಲಕ ಮಾದಕ ವ್ಯಸನ ಕಡಿಮೆಯಾಗಬೇಕು. ಕ್ರೀಡೆಯಿಂದ ಮಾತ್ರ ಇದರ ನಿಯಂತ್ರಣ ಸಾಧ್ಯವಿದೆ ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ 150ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯು 55, 60, 65, 70, 75, 80 ಹಾಗೂ 80 ವರ್ಷ ಮೇಲ್ಪಟ್ಟು ಸೇರಿ ಒಟ್ಟು 7 ವಿಭಾಗಗಳಲ್ಲಿ ನಡೆಯಿತು.
ಉದ್ಯಮಿಗಳಾದ ಗ್ಲೆನ್ ಡಯಾಸ್, ಮಿಥಿಲೇಶ್, ಸುದೇಶ್ ಶೆಟ್ಟಿ, ಸಜ್ಜನ್ ಶೆಟ್ಟಿ, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳೀ, ಕಿಶನ್ ಹೆಗ್ಡೆ ಕೊಳ್ಕೆಬೈಲು, ರಾಘವೇಂದ್ರ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು ಉಪಸ್ಥೀತರಿದ್ದರು.
ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್, ಮಾಜಿ ಸಚಿವ ರಮಾನಾಥ ರೈ ಹಾಗೂ ಇತರರು ಭೇಟಿ ನೀಡಿ ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೇಸನ್ ಡಯಾಸ್ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.