Home Mangalorean News Kannada News ವಿಕಿಪೀಡಿಯ ಸಂಪಾದನೋತ್ಸವ ಉದ್ಘಾಟನೆ

ವಿಕಿಪೀಡಿಯ ಸಂಪಾದನೋತ್ಸವ ಉದ್ಘಾಟನೆ

Spread the love

ವಿಕಿಪೀಡಿಯ ಸಂಪಾದನೋತ್ಸವ ಉದ್ಘಾಟನೆ

ಮಿಜಾರು: ‘ಕನ್ನಡ ವಿಕಿಪೀಡಿಯದಲ್ಲಿ ಸುಮಾರು 24 ಸಾವಿರದಷ್ಟು ಲೇಖನಗಳಿದ್ದು ಅದರಲ್ಲಿ ಶೇಕಡ 14ರಷ್ಟು ಲೇಖನಗಳು ಮಾತ್ರ ಓದಲು ಅರ್ಹವಾಗಿವೆ. ಈ ನಿಟ್ಟಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವಗಳು ವಿಕಿಪೀಡಿಯಾದ ಗುಣಮಟ್ಟವನ್ನು ಹೆಚ್ಚಿಸಲಿವೆ’ ಎಂದು ವಿಕಿಪೀಡಿಯನ್ ಗೋಪಾಲಕೃಷ್ಣ ಹೇಳಿದರು.

ಆಳ್ವಾಸ್ ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೆಷನ್ ವತಿಯಿಂದ ಶನಿವಾರ, ಮಿಜಾರು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ವಿಕಿಪೀಡಿಯ ಸಂಪಾದನೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವಿಕಿಪೀಡಯ ಸ್ಥಳೀಯ ಭಾಷೆಗಳ ಸಂರಕ್ಷಣೆಗೆ ಸೂಕ್ತ ವೇದಿಕೆ, ಇದರಲ್ಲಿ ನಮ್ಮನ್ನು ನಾವು ಹೆಚ್ಚು ತೊಡಗಿಸಿಕೊಂಡಷ್ಟು ಹೆಚ್ಚು ಗುರುತಿಸಿಕೊಳ್ಳಬಹುದು. ಇಲ್ಲಿ ಆಯ್ದುಕೊಳ್ಳುವ ವಿಷಯಗಳು ಸಂಶೋಧನೆ ಹೆಚ್ಚು ಒತ್ತು ನೀಡುವುದಲ್ಲದೆ, ಭವಿಷ್ಯಕ್ಕೂ ಕೊಡುಗೆ ನೀಡುತ್ತವೆ. ವಿಕಿಪೀಡಿಯ ಜ್ಞಾನ ವೃದ್ಧಿಯ ಜೊತೆ ಜ್ಞಾನವನ್ನು ಹಂಚುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ’ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ‘ಇಡೀ ಜಗತ್ತಿನ ಯೋಚನೆಗಳು ವ್ಯಾಪಾರೀಕರಣ ಹೊಂದುತ್ತಿರುವ ಸಂದರ್ಭದಲ್ಲಿ ವಿಕಿಪೀಡಿಯ ಅತ್ಯಂತ ಸುಭದ್ರ ಜ್ಞಾನವನ್ನು ಕಟ್ಟಿಕೊಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅತಿಹೆಚ್ಚು ವಿಕಿಪೀಡಿಯಾ ಲೇಖನಗಳನ್ನು ಸಂಪಾದಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಕಾಣಿಕೆ ನೀಡಲಾಯಿತು. ಎರಡು ದಿನ ನಡೆಯಲಿರುವ ಈ ಸಂಪಾದನೋತ್ಸವದಲ್ಲಿಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳಿಂದ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಿಕಿಪೀಡಿಯಾ ಸಂಪಾದನೆ ಕುರಿತು ತರಬೇತಿ ಪಡೆಯಲಿದ್ದಾರೆ,

ಕಾರ್ಯಕ್ರಮದಲ್ಲಿ ವಿಕಿಪೀಡಿಯನ್ ಲೋಕೇಶ್ ಕುಂಚಡ್ಕ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಅಶೋಕ್ ಕೆ ಜಿ, ಪತ್ರಿಕೋದ್ಯನ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಜೀವನ್‍ರಾಂ, ಉಪನ್ಯಾಸಕಿ ದೇವಿಶ್ರೀ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version