ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ನೇತೃತ್ವದಲ್ಲಿ ಸೊರಕೆ ಪರ ಮತಯಾಚನೆ

Spread the love

ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ನೇತೃತ್ವದಲ್ಲಿ ಸೊರಕೆ ಪರ ಮತಯಾಚನೆ

ಉಡುಪಿ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್ ನೇತೃತ್ವದಲ್ಲಿ ಪಡುಬಿದ್ರಿ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರ ಪರವಾಗಿ ಮತ ಪ್ರಚಾರ ಪಡುಬಿದ್ರಿಯ ಪೇಟೆಯಲ್ಲಿ ಬಿರುಸಿನಿಂದ ನಡೆಯಿತು.

ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಮ್ರಾನ್ ಮಜ್ದೂರ್ ,ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ನಿಯಾಜ್, ಪ್ರಭಾಕರ ಆಚಾರ್ಯ, ಹಮ್ರಜ್ ತನುಜ್ ಕರ್ಕೇರ, ಪಡುಬಿದ್ರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮುನಝ್, ಉಪಾಧ್ಯಕ್ಷರಾದ ಹಕಿಂ, ಕಾರ್ಯದರ್ಶಿಗಳಾದ ಮನ್ಸೂರು, ಅಯಝ್,ನರೇಗಲಪ್ಪಾ,ರಝಕ್, ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಶಫೀ ಹಾಗೂ ಕಾಂಗ್ರೆಸ್ ಮುಖಂಡರಾದ ನವೀನ್ ಶೆಟ್ಟಿ ,ಕರುಣಾಕರ್,ಹಸನ್ ಬಾವ, ಸಂಜೀವಿನಿ, ಅಶೋಕ್ ಲಿಯಾಕತ್ ಹುಸೈನ್, ಅಬ್ದುರ್ರಹ್ಮಾನ್ ಹೆಜಮಾಡಿ ಕೀರ್ತನ್, ಮತ್ತು 200 ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು , ಹಾಗೂ ಮುಂತಾದವರು ಉಪಸ್ಥಿತರಿದ್ದರು.


Spread the love