ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಉಸ್ತುವಾರಿಗಳ ಸಭೆ

Spread the love

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಉಸ್ತುವಾರಿಗಳ ಸಭೆ

ಉಡುಪಿ: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಎಲ್ಲಾ ಗ್ರಾಮೀಣ ಸಮಿತಿ ಉಸ್ತುವಾರಿಗಳ ಸಭೆ ಇತ್ತೀಚೆಗೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಉಸ್ತುವಾರಿಗಳು ಮಾಸ್ಟರ್ ಟ್ರೈನರ್ಸ್ ಗೆ ನಾಯಕರಾಗಿ ಗ್ರಾಮೀಣ ಮತ್ತು ಬೂತ್ ಸಂಘಟನೆಯನ್ನು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಹಾಗೂ ಮುಂಬರುವ ಚುನಾವಣೆಯ್ಲಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಸತತ ಪ್ರಯತ್ನ ನಡೆಸಬೇಕು ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಉಸ್ತುವಾರಿಗಳ ಮೂಲಕ ಆಯಾ ಗ್ರಾಮೀಣ ಸಮಿತಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವುದರ ಮೂಲಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೂಕ್ತ ರೀತಿಯಲ್ಲಿ ಎದುರಿಸಲು ಪ್ರಯತ್ನಿಸಲಾಗುವುದು ಎಂದರು.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ನಾಯಕರಾದ ದಿನಕರ ಹೇರೂರು, ಗೋಪಿ ನಾಯಕ್, ಭಾಸ್ಕರ್ ರಾವ್ ಕಿದಿಯೂರು, ರೆಹಮತುಲ್ಲ, ರಾಜೇಶ್ ಶೆಟ್ಟಿ ಕುಮ್ರಗೋಡು, ಬಾಲಚಂದ್ರ, ಹರೀಶ್ ಶೆಟ್ಟಿ, ಕೀಳಂಜೆ, ವೆಂಕಟೇಶ್ ಸುವರ್ಣ, ನಿತ್ಯಾನಂದ ಕೆಮ್ಮಣ್ಣು, ಬ್ಯಾಪ್ಟಿಸ್ಟ್ ಡಯಾಸ್, ರಾಘವೇಂದ್ರ ಶೆಟ್ಟಿ, ಸೂರ್ಯ ಸಾಲಿಯನ್, ಸಂಪತ್, ವಿಘ್ನೇಶ್ ಶೆಟ್ಟಿ, ಸಂಜೀವ ಪೂಜಾರಿ ಮಾಯಾಡಿ, ಪ್ರಶಾಂತ್ ಸುವರ್ಣ, ಫ್ರ್ಯಾಂಕಿ ಡಿಸೋಜಾ, ನಿತ್ಯಾನಂದ ಬಿ ಆರ್, ತಾಜೂದ್ದೀನ್, ಪ್ರಭಾಕರ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ, ಕುಮಾರ್ ಸುವರ್ಣ, ನರಸಿಂಹ ಪೂಜಾರಿ, ಶೀನ ಪೂಜಾರಿ, ಉಮೇಶ್ ಶೆಟ್ಟಿ, ಉಮೇಶ್ ಪೂಜಾರಿ, ಗೋಪಾಲ ಪೂಜಾರಿ, ಗುರುರಾಜ ಉದಯ ಸುವರ್ಣ, ವಿಜಯಲಕ್ಷ್ಮೀ, ಸಂಹಿತ್, ಶ್ರೀನಿವಾಸ ಗುಲ್ವಾಡಿ, ಉಮ್ಮರ್ ಸಾಬ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love