ರಾಜ್ಯಸಭಾ ಸದಸ್ಯ ಸುರೇಶ್ ಗೋಪಿಗೆ ಸ್ವಾಗತ

Spread the love

ರಾಜ್ಯಸಭಾ ಸದಸ್ಯ ಸುರೇಶ್ ಗೋಪಿಗೆ  ಸ್ವಾಗತ

ಮಂಗಳೂರು: `ಆಹುತಿ-ದ ಅನ್‍ಟೋಲ್ಡ್ ಸ್ಟೋರೀಸ್ ಆಫ್ ಸ್ಯಾಕ್ರಿಫೈಸ್ ಇನ್ ಕೇರಳ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ನಡೆದಿದ್ದು, ಈ ಸಮಾರಂಭಕ್ಕೆ ಆಗಮಿಸಿದ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಅವರನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.

mp-suresh-gopi

ಈ ಸಂದರ್ಭ ದ.ಕ. ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ಸಿಟಿಜನ್ ಕೌನ್ಸಿಲ್‍ನ ಅಧ್ಯಕ್ಷ ಸುನಿಲ್ ಆಚಾರ್, ಬಿಜೆಪಿ ಮಲೆಯಾಳಿ ಸೆಲ್‍ನ ಸಹಸಂಚಾಲಕ ರವೀಂದ್ರನ್, ಬಿಜೆಪಿ ಮಲೆಯಾಳಿ ಸೆಲ್‍ನ ರಾಜ್ಯ ಸಮಿತಿಯ ಸದಸ್ಯ ಟಿ.ಎ. ಅಶೋಕನ್, ಬಿಜೆಪಿ ಮಲೆಯಾಳಿ ಸೆಲ್‍ನ ದ.ಕ. ಸಂಚಾಲಕ ವಿ.ಪಿ. ಕೃಷ್ಣರಾಜ್, ಬಿಜೆಪಿ ಕೋಶಾಧಿಕಾರಿ ಸಂಜಯ ಪ್ರಭು, ಬಿಜೆಪಿ ಕಚೇರಿ ಕಾರ್ಯದರ್ಶಿ ಗುರುಚರಣ್, ಆರ್‍ಎಸ್‍ಎಸ್‍ನ ಸಂಪರ್ಕ ಪ್ರಮುಖ್ ಅಂಬುಜಾಕ್ಷ, ಬಿನಿಲ್ ಬೋಸ್ ಮತ್ತಿತರರು ಉಪಸ್ಥಿತರಿದ್ದರು.


Spread the love