Spread the love
ಪಿಲಿಕುಳ ಆಯುಕ್ತರಾಗಿ ಡಾ ಅರುಣ್ ಕುಮಾರ್ ಶೆಟ್ಟಿ ನೇಮಕ
ಪಿಲಿಕುಳ ಅಭಿವೃಧ್ಧಿ ಪ್ರಾಧಿಕಾರದಲ್ಲಿ ಕಳೆದ ಒಂದೂವರೆ ವಷ೯ದಿಂದ ಹೆಚ್ಚುವರಿ ಪ್ರಭಾರದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ ದ.ಕ ಜಿಲ್ಲೆಯ ಪಶುಪಾಲನಾ ಮತ್ತು ಪಶುವ್ಶೆದ್ಯಕೀಯ ಸೇವಾ ಇಲಾಖೆಯ ಉಪನಿದೇ೯ಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅರುಣ ಕುಮಾರ ಶೆಟ್ಟಿ ಎನ್ ಇವರನ್ನು ಮತ್ತೆ ಪಿಲಿಕುಳ ಅಭಿವ್ಳಧ್ಧಿ ಪ್ರಾಧಿಕಾರದ ಆಯುಕ್ತರಾಗಿ ಹೆಚ್ಚುವರಿ ಪ್ರಭಾರದಲ್ಲಿ ನೇಮಕ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಮಾಡಿರುತ್ತಾರೆ .
ಕಳೆದ ಜೂನ್ 2026 ರಲ್ಲಿ ಸರಕಾರವು ರಾಜ್ಯ ಲೆಕ್ಕ ಪರಿಶೋದನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಜಂಟಿ ನಿದೇ೯ಶಕರಾಗಿದ್ದ ಶ್ರೀಕಾಂತ್ ರಾವ್ ರವರನ್ನು ಆಯುಕ್ತರನ್ನಾಗಿ ನೇಮಕ ಮಾಡಿದ್ದು ಸದ್ರಿಯವರು ಜುಲ್ಳೆ ತಿಂಗಳಿನಲ್ಲಿ ನಿವ್ಫತ್ತರಾಗಿರುವ ಹಿನ್ನಲೆಯಲ್ಲಿ ಪುನಃ ಈ ಹಿಂದೆ ಆಯುಕ್ತರಾಗಿ ಸೇವೆ ಸಲ್ಲಿಸಿದ ಡಾ. ಅರುಣ ಕುಮಾರ ಶೆಟ್ಟಿ ಎನ್ ಇವರನ್ನು ನೇಮಕ ಮಾಡಲಾಗಿದೆ
Spread the love













