ಕಸ್ತೂರಿ ರಂಗನ್ ವರದಿ ಜಾರಿಯ ಕಾಟಚಾರದ ಸಭೆ – ಕೆ. ವಿಕಾಸ್ ಹೆಗ್ಡೆ ಗಂಭೀರ ಆರೋಪ

Spread the love

ಕಸ್ತೂರಿ ರಂಗನ್ ವರದಿ ಜಾರಿಯ ಕಾಟಚಾರದ ಸಭೆ – ಕೆ. ವಿಕಾಸ್ ಹೆಗ್ಡೆ ಗಂಭೀರ ಆರೋಪ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜಾರಿಯಾಗಲಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವಾಲಯ 7 ನೇ ಕರಡು ಅಧಿಸೂಚನೆ ಪ್ರಕಟಿಸಿರುವಾಗ ಇದರ ಬಗ್ಗೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ಕೇವಲ ಕಾಟಚಾರದ ಸಭೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು ಪಿ ಎ ಸರ್ಕಾರ ಇರುವಾಗ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಪರಿಸರ ತಜ್ಞ ಮಾಧವ್ ಗಾಡ್ಗಿಲ್ ರವರ ನೇತೃತ್ವದ ಒಂದು ಸಮಿತಿ ರಚನೆ ಮಾಡಿ ಅವರಿಂದ ಬಂದ ವರದಿ ಅತ್ಯಂತ ಜನವಿರೋಧಿಯಾಗಿತ್ತು ಎನ್ನುವ ಕಾರಣಕ್ಕೆ ಅದನ್ನು ಕೈಬಿಟ್ಟು ಪರಿಸರ ತಜ್ಞ ಕಸ್ತೂರಿ ರಂಗನ್ ರವರ ನೇತೃತ್ವದ ಸಮಿತಿ ರಚನೆ ಮಾಡಿ ವರದಿ ಪಡೆದು ಅದು ಈಗ ಜಾರಿ ಹಂತದಲ್ಲಿದೆ. ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಕೂಡ ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನ ವಾಸಿಗಳಿಗೆ ಜನವಿರೋಧಿ ಅಂಶಗಳು ಇವೆ ಮತ್ತು ಅನಗತ್ಯವಾಗಿ ಅದೆಷ್ಟೋ ಗ್ರಾಮಗಳನ್ನು ಈ ವರದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಹಾಗೂ ಈ ವರದಿ ಜಾರಿಗೆ ಭೌತಿಕ ಸಮೀಕ್ಷೆ ಮಾಡದೆ ಅಧಿಕಾರಿಗಳು ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ವೈಮಾನಿಕ ಸಮೀಕ್ಷೆ ಮಾಡಿರುವುದರಿಂದ ಪುನಃ ಭೌತಿಕ ಸಮೀಕ್ಷೆ ಮಾಡಬೇಕು ಎನ್ನುವ ಆಗ್ರಹ ಪ್ರಾರಂಭದಿಂದ ಕೇಳಿಬಂದರೂ ಸಹ ಇಲ್ಲಿಯ ತನಕ ಇದು ಕಾರ್ಯರೂಪಕ್ಕೆ ಬರದೇ ಇರಲು ಇಲ್ಲಿಯ ಸಂಸದರ ಹಾಗೂ ಶಾಸಕರುಗಳ ನಿಷ್ಕ್ರಿಯತೆಯೆ ಕಾರಣ. ಸಂಬಂಧಪಟ್ಟ ಜನಪ್ರತಿನಿದಿನಗಳು ಅಧಿಕಾರಿಗಳ, ರೈತ ಸಂಘಟನೆಗಳ ಕಾಟಚಾರದ ಸಭೆ ಮಾಡಿ, ಪತ್ರಿಕೆಗಳಿಗೆ ಹೇಳಿಕೆ ಕೊಟ್ಟು ಕೈತೊಳೆದು ಕೊಳ್ಳುತ್ತಿದ್ದಾರೆ ಬಿಟ್ಟರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಬಂಧ ಪಟ್ಟ ಸಚಿವರನ್ನು ಹಾಗೂ ಅಧಿಕಾರಿಗಳನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಆಹ್ವಾನ ಮಾಡಿ ಸಾಧಕ ಬಾಧಕಗಳ ಕುರಿತು ಸಭೆಯನ್ನು ಇಲ್ಲಿಯ ತನಕ ನಡೆಸದೆ ಇರುವುದು ಅವರು ಪ್ರತಿನಿಧಿಸುವ ಜನರ ಬಗೆಗಿನ ನಿರ್ಲಕ್ಷ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


Spread the love
Subscribe
Notify of

0 Comments