Spread the love
ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಯಂತ್ರ, ರಿಕ್ಲೈನರ್ ಹಾಸಿಗೆ ಹಾಗೂ ಗಾಲಿ ಕುರ್ಚಿ ಹಸ್ತಾಂತರ
ಕುಂದಾಪುರ: ಬಸ್ರೂರು ಕೋಳ್ಕೆರೆ ಮನೆ ರವಿರಾಜ್ ಶೆಟ್ಟಿಯವರ ಸ್ಮರಣಾರ್ಥ ಸುಮಾರು ಎರಡುವರೆ ಲಕ್ಷ ಬೆಲೆಬಾಳುವ ಆಮ್ಲಜನಕ ಪೂರೈಕೆ ಯಂತ್ರ, ರಿಕ್ಲೈನರ್ ಹಾಸಿಗೆ ಹಾಗೂ ಗಾಲಿ ಕುರ್ಚಿಯನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಅವರ ಮಗ ಡಾ. ಅರ್ಜುನ್ ಶೆಟ್ಟಿಯವರು ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ಪ್ರೇಮಾನಂದರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹಳ್ನಾಡು ದೇವಾನಂದ ಶೆಟ್ಟಿ, ಮಾಜಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಕೆ. ವಿಕಾಸ್ ಹೆಗ್ಡೆ, ಮಾಜಿ ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ ಉಪಸ್ಥಿತರಿದ್ದರು.
Spread the love













