ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ: ನೋಟೀಸ್ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ

Spread the love

ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ: ನೋಟೀಸ್ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ

ಮಂಗಳೂರು: ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ನೋಟೀಸ್ ಕುರಿತು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರು ನೀಡಿರುವ ನೋಟೀಸ್ ಕುರಿತು ಮಾತನಾಡಿದ ಅವರು, “ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ. ನನ್ನ ಮೇಲೆ 110 ಕೇಸ್‌ಗಳಿವೆ. ಇದ್ಯಾವ ಲೆಕ್ಕ” ಎಂದು ಹೇಳಿದ್ದಾರೆ.

“ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಅಡಿಯಲ್ಲಿ ಫೋನ್ ಮಾಡಿ ಮಾತನಾಡಿದ್ದೇನೆ. ನಾನು ಫೋನ್ ಮಾಡಿ ಮಾತನಾಡಿದ್ದು ಹೌದು. ಆದರೆ, ನಾನು ಕೊಲೆ ಮಾಡಿ ಎಂದು ಮಾತನಾಡಿದ್ದೇನಾ? ನಾನು ಮಾತನಾಡಿರುವ ರೆಕಾರ್ಡ್ ಅವರ ಬಳಿಯೇ ಇದೆ. ಅದರಲ್ಲಿ ಏನಿದೆ ಎಂಬುದು ಅವರಿಗೆ ಗೊತ್ತಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ನಾನು ಯಾಕೆ ವಿಚಾರಣೆಗೆ ಹಾಜರಾಗಬೇಕು? ನನಗೆ ಸಮಯ ನೀಡಲು ಅವರ್ಯಾರು?” ಎಂದು ಅವರು ಪೊಲೀಸರ ನೋಟೀಸ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೆಹಮಾನ್ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, “ನಾವ್ಯಾರೂ ಹತ್ಯೆಯನ್ನು ಸಮರ್ಥಿಸುವುದಿಲ್ಲ. ಆದರೆ ಪ್ರಕರಣದಲ್ಲಿ ಇಲ್ಲದವರ ಮೇಲೂ ಕೇಸ್ ದಾಖಲಿಸಲಾಗಿದೆ” ಎಂದು ಆರೋಪಿಸಿದ್ದಾರೆ.

“ಕಾನೂನು ಬಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಹೇಳುತ್ತಾರೆ ಎಂಬ ಕಾರಣಕ್ಕೆ ನಮ್ಮ ಮೇಲೆ ದಮನ ಮಾಡಬಾರದು. ಅಧಿಕಾರಿಗಳು ಅವರ ಚೇಲಾಗಳಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಮಾತನಾಡಿದ ಅವರು, “ನನ್ನ ಮೇಲೆ 110 ಕೇಸ್‌ಗಳಿವೆ. ಇದು ಕೂಡ ಒಂದು ಕೂದಲಿನಷ್ಟೇ” ಎಂದು ಹೇಳಿದ್ದಾರೆ.


Spread the love
Subscribe
Notify of

0 Comments