ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ನಾಲ್ಕು ಲಾರಿಗಳ ವಶ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ನಾಲ್ಕು ಲಾರಿಗಳ ವಶ

ಮಂಗಳೂರು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ನಾಲ್ಕು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಒಟ್ಟು ಮೌಲ್ಯ ರೂ 36.50 ಲಕ್ಷ ಆಗಿದೆ.

ಬುಧವಾರ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ಬಿ.ಸಿ. ರೋಡ್ ಕಡೆಯಿಂದ ಪಡೀಲ್ ಮಾರ್ಗವಾಗಿ ಕೇರಳ ಕಡೆಗೆ ಬರುತ್ತಿದ್ದ ಆಸ್ಟಿನ್ ಮಿರಾಂದ ಎಂಬವರು ಮಾಲಕ & ಚಾಲಕರಾಗಿರುವ KA-19-D-5378 ನೇ ಟಿಪ್ಪರ್ ಲಾರಿ, ಹಸನಬ್ಬ ಎಂಬವರು ಮಾಲಕ & ಚಾಲಕರಾಗಿರುವ KA-19-AA-0493 ನೇ ಟಿಪ್ಪರ್ ಲಾರಿ, ಅಬ್ದುಲ್ ರೆಹಮಾನ್ ರವರ ಮಾಲಕತ್ವದ ಹಾಗೂ ಬಿಜು ಎಂಬವರು ಚಾಲಕರಾಗಿರುವ KA-19-AA-9589 ನೇ ಲಾರಿ ಮತ್ತು ಹರೀಶ್ ರವರ ಮಾಲಕತ್ವದ KA-54-5643 (ಚಾಲಕನು ಪರಾರಿಯಾಗಿರುತ್ತಾನೆ) ನೇ ನಂಬ್ರದ ಲಾರಿಗಳಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ, ಮುಂದಿನ ಸೂಕ್ತ ಕಾನೂನು ಕ್ರಮಕ್ಕಾಗಿ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ರವರಿಗೆ ಹಸ್ತಾಂತರಿಸಲಾಗಿದೆ. ಸ್ವಾಧೀನ ಪಡಿಸಿಕೊಂಡ ಮರಳು ಮತ್ತು ಲಾರಿಯ ಅಂದಾಜು ಮೌಲ್ಯ ಒಟ್ಟು ರೂ. 36,50,000/- ಆಗಬಹುದು.

ಕಂಕನಾಡಿ ನಗರ ಪೊಲೀಸ್ ಠಾಣಾ ನಿರೀಕ್ಷಕರಾದ ಅಶೋಕ್ ಪಿ. ಹಾಗೂ ಪಿ.ಎಸ್.ಐ. ರವರಾದ ಪ್ರದೀಪ್ ಟಿ. ಆರ್. ಮತ್ತು ಸಿಸಿಬಿ ಘಟಕದ ಪಿ.ಎಸ್.ಐ. ರವರಾದ ಕಬ್ಬಾಳ್ ರಾಜ್ ಮತ್ತು ಠಾಣಾ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.