ಉಡುಪಿ: ಇಂದಿರಾನಗರ ಮನೆಗಳವು- ಇಬ್ಬರ ಬಂಧನ

Spread the love

ಉಡುಪಿ: ಇಂದಿರಾನಗರ ಮನೆಗಳವು- ಇಬ್ಬರ ಬಂಧನ

ಉಡುಪಿ: ಇಂದಿರಾನಗರದ ಶಿವಳ್ಳಿ ಎಂಬುವರ ಮನೆಯಲ್ಲಿ ಈಚೆಗೆ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

 

ಇಂಣದಿರಾನಗರದ ಮಹಮ್ಮದ್ ಫಾರೂಖ್‌ ಹಾಗೂ ಕುಕ್ಕಿಕಟ್ಟೆಯ ಅಫ್ಜಲ್ ಬಂಧಿತರು. ಆರೋಪಿಗಳಿಂದ 66.850 ಗ್ರಾಂ ಚಿನ್ನಾಭರಣ, ₹ 4800 ನಗದು, ಮೂರು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಉಡುಪಿ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್‌, ನಗರಠಾಣೆ ಪಿಎಸ್‌ಐ ಅನಂತ ಪದ್ಮನಾಭ, ಎಎಸ್‌ಐ ಅಚ್ಯುತ, ಗೋಪಾಲಕೃಷ್ಣ ಜೋಗಿ, ವಿಜಯ, ಸಿಬ್ಬಂದಿ ಜೀವನ್ ಕುಮಾರ್, ಲೋಕೇಶ್‌, ಬಾಲಕೃಷ್ಣ, ಮಾಲತಿ, ಇಮ್ರಾನ್, ಸಂಗನಗೌಡ, ಸಂತೋಷ್ ರಾಥೋಡ್, ಕಿರಣ್, ರವೀಂದ್ರ, ಪ್ರಸಾದ್ ಭಾಗವಹಿಸಿದ್ದರು.


Spread the love