ಉಡುಪಿ: ಬೈಂದೂರು ಅಕ್ಷತಾ ಕೊಲೆ ಪ್ರಕರಣ ಭೇಧಿಸಿದ ಜಿಲ್ಲಾ ಎಸ್ ಪಿ ಗೆ ಮಹಿಳಾ ಕಾಂಗ್ರೆಸ್ ಅಭಿನಂದನೆ

Spread the love

ಉಡುಪಿ: ಬೈಂದೂರು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಕೊಲೆ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಅನೇಕ ಊಹಾಪೋಹಗಳಿಗೆ ತೆರೆ ಎಳೆದ ಉಡುಪಿ ಜಿಲ್ಲಾ ಎಸ್.ಪಿ ಮತ್ತು ಅವರ ಎಲ್ಲಾ ತಂಡಕ್ಕೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.

th tt

ಈ ಸಂದರ್ಭ ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷೆ ವೆರೋನಿಕಾ ಕರ್ನೇಲಿಯೊ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಡಾ.ಸುನಿತಾ ಶೆಟ್ಟಿ ,ಜಿ.ಪಂ ಸದಸ್ಯೆ ಮಲ್ಲಿಕಾ ಬಿ.ಪೂಜಾರಿ,ಗೋಪಿ ನಾಯ್ಕ್ ,ರೋಶನಿ ಒಲಿವೇರಾ, ಚಂದ್ರಿಕಾ ಶೆಟ್ಟಿ, ರಮಾದೇವಿ,ಜಯಶ್ರೀ,ಪ್ರಮೀಳಾ ಜತ್ತನ್ನ, ಅಮ್ಮಣಿ,ಗೀತಾ ವಾಗ್ಲೆ ಉಪಸ್ಥಿತರಿದ್ದರು.


Spread the love