ಎ ಜೆ ಆಸ್ಪತ್ರೆಯಲ್ಲಿ ಕಾಲಿನ ಮಂಡಿ ಜೋಡಣಾ ಶಸ್ತ್ರ ಚಿಕಿತ್ಸೆಯ ಕಾರ್ಯಗಾರ

Spread the love

ಮಂಗಳೂರು : ಎ.ಜೆ. ವೈದ್ಯಕೀಯ ಕಾಲೇಜಿನ ಹಾಗೂ ಅಸ್ಪತ್ರೆಯ ಸಹಭಾಗಿತ್ವದಲ್ಲಿ ಕಾಲಿನ ಮಂಡಿ ಜೋಡಣಾ ಶಸ್ತ್ರಚಿಕಿತ್ಸೆಯ ಕಾರ್ಯಗಾರವನ್ನು ಇತ್ತೀಚೆಗೆ ನೆರವೇರಿಸಲಾಗಿತ್ತು.

aj-hospital-workshop

ಸಮಾರಂಭವನ್ನು ನಿಟ್ಟೆಯ ಪ್ರೋ. ಚಾನ್ಸೆಲರ್ ಹಾಗೂ ಹಿರಿಯ ಮೂಳೆ ತಜ್ಞ ಡಾ. ಶಾಂತಾರಾಂ ಶೆಟ್ಟಿಯವರು ಉದ್ಘಾಟಿಸಿದರು. ಮೂಳೆ ಹಾಗೂ ಕೀಲು ವಿಭಾಗದ ಮುಖ್ಯಪ್ರಾಧ್ಯಾಪಕರಾದ ಡಾ. ಶ್ರೀಧರ್ ಶೆಟ್ಟಿಯವರು ಈ ಕಾರ್ಯಗಾರವನ್ನು ಆಯೋಜಿಸಿದ್ದರು.
ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಡಾ. ಸಂಜಯ್ ಪೈಯವರು ಅಧುನಿಕ ಕೀಲು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದನ್ನು, ಕಾರ್ಯಗರದಲ್ಲಿ ಭಾಗವಹಿಸಿದವರಿಗೆ ನೇರ ಪ್ರಸಾರ ಮಾಡಲಾಯಿತು. ಕಾರ್ಯದರ್ಶಿ ಡಾ. ಮಹೇಶ್ ಶೆಟ್ಟಿಯವರು ಸಹಕರಿಸಿದರು.


Spread the love