ಕಾಸರಗೋಡು ಯುಡಿಎಫ್ ಅಭ್ಯರ್ಥಿ ರಾಜಮೋಹನ್ ರೊಸಾರಿಯೊ ಕ್ಯಾಥೆಡ್ರಲ್ ಗೆ ಭೇಟಿ

Spread the love

ಕಾಸರಗೋಡು ಯುಡಿಎಫ್ ಅಭ್ಯರ್ಥಿ ರಾಜಮೋಹನ್ ರೊಸಾರಿಯೊ ಕ್ಯಾಥೆಡ್ರಲ್ ಗೆ ಭೇಟಿ

ಮಂಗಳೂರು: ಕಾಸರಗೋಡು ಲೊಕಸಭಾ ಕ್ಷೇತ್ರದ ಯುಡಿಎಫ್ ಕಾಂಗ್ರೆಸ್ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಮಂಗಳೂರು ಧರ್ಮ ಪ್ರಾಂತ್ಯದ ರೊಜಾರಿಯೊ ಕಾಥೆಡ್ರೆಲ್ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಧರ್ಮ ಪ್ರಾಂತ್ಯದ ನಾಗರಿಕ ಜಾಗೃತಿ ಹಾಗೂ ಅಭಿವೃದ್ದಿ ಸಮಿತಿಯ ಸಂಚಾಲಕರು ಆಗಿರುವ ವಂ|ಜೆ.ಬಿ ಕ್ರಾಸ್ತಾರವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂಧರ್ಭ ಸಮಿತಿಯ ಕಾರ್ಯದರ್ಶಿ ಸುಶೀಲ್ ನೊರೊನ್ಹ ವಂ| ಫ್ಲಾವಿನ್ ಲೋಬೊ,ವಂ|ರೊಕ್ಕಿ ಫೆರ್ನಾಡಿಸ್, ವಂ| ವಿಕ್ಟರ್ ಡಿಸೋಜ, ಕಾಸರಗೋಡಿನ ಹಿರಿಯ ವಕೀಲರಾದ ತೋಮಸ್ ಡಿಸೋಜ, ಯುವ ಮುಂದಾಳು ಲೊರೆನ್ಸ್ ಡಿಸೋಜ ಕಾಸರಗೋಡ್ ಓSUI ನ ಜಿಲ್ಲಾ ಅದ್ಯಕ್ಷರಾದ ನೊಯೆಲ್ ಜೋಸೆಪ್ ಉಪಸ್ಥಿತರಿದ್ದರು.


Spread the love