ಕಿನ್ನಿಗೋಳಿ ಪರಿಸರದಲ್ಲಿ ಮಿಥುನ್ ರೈ ರೋಡ್ ಶೋ

ಕಿನ್ನಿಗೋಳಿ ಪರಿಸರದಲ್ಲಿ ಮಿಥುನ್ ರೈ ರೋಡ್ ಶೋ

ಕಿನ್ನಿಗೋಳಿ : ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ. ಮಿಥುನ್ ಎಂ ಕಿನ್ನಿಗೋಳಿ ಪರಿಸರದಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರೊಂದಿಗೆ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಮಾಜಿ ಸಚಿವರಾದ ಅಭಯಚಂದ್ರ ಜೈನ್, ಅಮರನಾಥ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಧನಂಜಯ್ ಮಟ್ಟು, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ಕೋಟ್ಯಾನ್, ಎಪಿಎಂಸಿ ಆಧ್ಯಕ್ಷ ಪ್ರಮೋದ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ವಸಂತ್ ಬರ್ನಾಡ್ ಮೊದಲಾದವರು ಉಪಸ್ಥಿತರಿದ್ದರು.