ಗುರುಪುರ  ಸೇತುವೆ ನಿರ್ವಹಣೆ ಕಾಮಗಾರಿ: ಸಂಚಾರ ಬದಲು

Spread the love

ಗುರುಪುರ  ಸೇತುವೆ ನಿರ್ವಹಣೆ ಕಾಮಗಾರಿ: ಸಂಚಾರ ಬದಲು

ಮಂಗಳೂರು: ಗುರುಪುರ ಸೇತುವೆ ತುರ್ತು ನಿರ್ವಹಣೆ ಕಾಮಗಾರಿ ಪ್ರಯುಕ್ತ ಜೂನ್ 28 ರಂದು ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.


ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಈ ಸಮಯದಲ್ಲಿ ವಾಮಂಜೂರು- ಪಚ್ಚನಾಡಿ-ಬೋಂದೆಲ್-ಕಾವೂರು-ಬಜಪೆ- ಕೈಕಂಬ ಮಾರ್ಗದಲ್ಲಿ ಸಂಚರಿಸಬಹುದು. ಕೈಕಂಬದಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love