ಜುಲೈ 8 : ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆಅಂಗಡಿ , ಅಲೆವೂರು ವತಿಯಿಂದ ಕೆಸರ್ಡ್ ಒಂಜಿ ದಿನ

Spread the love

ಜುಲೈ 8 : ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆಅಂಗಡಿ , ಅಲೆವೂರು ವತಿಯಿಂದ ಕೆಸರ್ಡ್ ಒಂಜಿ ದಿನ

ಉಡುಪಿ: ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ.) ಗುಡ್ಡೆಅಂಗಡಿ , ಅಲೆವೂರು ಇದರ 34ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಯುವಜನ ಸೇವೆ , ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಕನಾಟಕ ಸರಕಾರ ಮತ್ತು ಜಿಲ್ಲಾ ಪಂಚಾಯತ್ , ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮಟ್ಟದ ಕ್ರೀಡೋತ್ಸವ- “ ಕೆಸರ್ಡ್ ಒಂಜಿ ದಿನ ”ವು ಜುಲೈ 8ರಂದು ಭಾನುವಾರ ಬೆಳಿಗ್ಗೆ 9:00 ಘಂಟೆಗೆ ಅಲೆವೂರು ಜೋಡುರಸ್ತೆಯ ವಿ4 ಗ್ರೀನ್ಸ್‍ನ ದೊಡ್ಡಮನೆ ಗದ್ದೆಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ನಡೆಯಲಿರುವ ಜಾನಪದ ಸಮೂಹ ನೃತ್ಯ ಸ್ಫರ್ಧೆಗೆ ಮುಕ್ತ ಅವಕಾಶವಿದ್ದು , ಸೌತ್ ಕೆನರಾ ಫೋಟೋಗ್ರಾಫಿ ಅಸೋಸಿಯೇಶನ್ ಇವರ ಸಹಯೊಗದೊಂದಿಗೆ ಛಾಯಾಚಿತ್ರ ಸ್ಫರ್ಧೆ-ಅಲೆವೂರು ಕೆಸರುಗದ್ದೆಯ ಛಾಯಾ ವೈವಿಧ್ಯತೆ ಯು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ  ರಾಜೇಶ್ ಶೆಟ್ಟಿ (ಮೊ: 9900797945) , ಜಲೇಶ್ ಶೆಟ್ಟಿ (ಮೊ: 9886119118) ಮತ್ತು ಸಂತೋಷ್ ಕುಮಾರ್ (ಮೊ: 9880046669) ಸಂಪರ್ಕಿಸಲು ವಿನಂತಿಸಲಾಗಿದೆ.


Spread the love