ಜು.3: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವತಿಯಿಂದ  ಹಜ್ಜ್ ತರಬೇತಿ ಶಿಬಿರ

Spread the love

ಜು.3: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವತಿಯಿಂದ  ಹಜ್ಜ್ ತರಬೇತಿ ಶಿಬಿರ

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು, ಇದರ ವತಿಯಿಂದ 2018 ಜುಲೈ 03, ಮಂಗಳವಾರ ಹಜ್ಜ್ ಗೆ ತೆರಳುವವರಿಗಾಗಿ ಹಜ್ಜ್ ತರಬೇತಿ ಶಿಬಿರವನ್ನು ಆಯೋಜಿಸಿಲಾಗಿದೆ. ಈ ಕಾರ್ಯಕ್ರಮವು ಬೆಳಿಗ್ಗೆ 10 ರಿಂದ ಸಂಜೆ 3ರ ವರೆಗೆ ಮಂಗಳೂರು ನಗರದ ಬಂದರಿನ ಬೀಬಿ ಅಲಾಬಿ ರಸ್ತೆಯಲ್ಲಿರುವ ಹಿದಾಯತ್ ಸೆಂಟರ್‍ ನ ಸಭಾಂಗಣದಲ್ಲಿ ಜರುಗಲಿರುವುದು.

ಈ ಕಾರ್ಯಕ್ರಮದಲ್ಲಿ ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನ ಯಹ್ಯಾ ತಂಙಳ್ ಮದನಿ, ಬ್ಯಾರಿ ಭಾಷೆಯಲ್ಲಿ, ಮೌಲಾನ ಮುಫ್ತಿ ಅಬ್ದುಲ್ ಮನ್ನಾನ್ ಸಾಹೇಬ್ ಉರ್ದು ಭಾಷೆಯಲ್ಲಿ, ಜನಾಬ್ ಮುಹಮ್ಮದ್ ಕುಂಞ ಕನ್ನಡ ಭಾಷೆಯಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿಯವರು ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಗಲಿದೆ.

ವಿಶೇಷ ಆಕರ್ಷಣೆಯಾಗಿ ಕಾರ್ಯಕ್ರಮದಲ್ಲಿ ಹಜ್ಜ್ ಪ್ರಾತಕ್ಷಿಕೆಯ ಸಿ.ಡಿ. ಪ್ರದರ್ಶನವಿರುವುದು. ಹಜ್ಜ್ ಗೆ ತೆರಳುವವರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: 9449470967, 9845665198 ಅನ್ನು ಸಂಪರ್ಕಿಸಬಹುದು.


Spread the love