ತಣ್ಣೀರುಬಾವಿ ಬಳಿ ಹುಟ್ಟುಹಬ್ಬ ಮುಗಿಸಿ ಬರುತ್ತಿದ್ದವರ ಮೇಲೆ ಹಲ್ಲೆ; ಮೂವರ ಬಂಧನ ಮಂಗಳೂರು:

Spread the love

ತಣ್ಣೀರುಬಾವಿ ಬಳಿ ಹುಟ್ಟುಹಬ್ಬ ಮುಗಿಸಿ ಬರುತ್ತಿದ್ದವರ ಮೇಲೆ ಹಲ್ಲೆ; ಮೂವರ ಬಂಧನ

ಮಂಗಳೂರು: ಹುಟ್ಟಿದ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ಮೂವರು ಯುವಕರಿಗೆ ತಣ್ಣೀರುಬಾವಿ ಚರ್ಚಿನ ಬಳಿ ಹಲ್ಲೆ ನಡೆಸಿದ ಮೂವರು ಯುವಕರನ್ನು ಪಣಂಬೂರು ಪೋಲಿಸರು ಭಾನುವಾರ ಬಂಧಿಸಿದ್ದಾರೆ.

ಬಂಧೀತರನ್ನು ಸುಕೇಶ್ ಪುತ್ರನ್ ಬೈಕಂಪಾಡಿ, ವರುಣ್ ಸುವರ್ಣ ತಣ್ಣೀರು ಬಾವಿ ಮತ್ತು ದೀಕ್ಷಿತ್ ಪುತ್ರನ್ ತಣ್ಣೀರು ಬಾವಿ.

ಶನಿವಾರ ಸಂಜೆ ಸಭೀರ್, ಸಮೀರ್, ನಿತೇಶ್, ಸ್ವೀಟಿ ಮತ್ತು ರೋಶನಿ ಅವರು ಹುಟ್ಟುಹಬ್ಬ ಆಚರಣೆ ಮಾಡಿ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಐದು ಮಂದಿ ಗುಂಪು ಸಭೀತ್, ಸಮೀರ್ ಮತ್ತು ನಿತೇಶ್ ಅವರ ಮೇಲೆ ತಣ್ಣೀರು ಬಾವಿ ಫಾತಿಮಾ ಚರ್ಚಿನ ಬಳಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿ ಪಣಂಬೂರು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.


Spread the love