
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಸಿಕ ಸಭೆ
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಸಿಕ ಸಭೆ ಇತ್ತೀಚಿಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಸಂಸದರಾದ ಬಿ.ಇಬ್ರಾಹೀಂ, ಮಾಜಿ ಶಾಸಕರುಗಳಾದ ಶಕುಂತಲಾ ಶೆಟ್ಟಿ, ಐವನ್ ಡಿಸೋಜಾ, ಕೆಪಿಸಿಸಿ ಪ್ರ.ಕಾರ್ಯದರ್ಶಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರುಗಳಾದ ಲುಕ್ಮಾನ್ ಬಂಟ್ವಾಳ್, ಶಾಲೆಟ್ ಪಿಂಟೊ, ಜೋಕ್ಕಿಂ ಡಿಸೋಜಾ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಸವಾದ್ ಸುಳ್ಯ, ಶೇಖರ್ ಕುಕ್ಕೇಡಿ, ಶುಭಾಷ್ ಕೊಲ್ನಾಡ್, ಲಾರೆನ್ಸ್ ಡಿಸೋಜಾ, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ನಾರಾಯಣ್ ನಾಯ್ಕ್, ಕೌಶಾಲ್ ಪ್ರಸಾದ್ ಶೆಟ್ಟಿ, ಸಚಿನ್ ರಾಜ್, ಸದಾಶಿವ್ ಉಳ್ಳಾಲ್, ಕೆಪಿಸಿಸಿ ಸದಸ್ಯರು, ಡಿಸಿಸಿ ಪದಾಧಿಕಾರಿಗಳು-ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಕೆಪಿಸಿಸಿ ಸಂಯೋಜಕರುಗಳು, ಬ್ಲಾಕ್ ಉಸ್ತುವಾರಿಗಳು ಮುಂತಾದವರು ಉಪಸ್ಥಿತರಿದ್ದರು.
ಡಿಸಿಸಿ ಪ್ರ.ಕಾರ್ಯದರ್ಶಿ ನೀರಜ್ ಪಾಲ್, ಕಾರ್ಯದರ್ಶಿಗಳಾದ ಯು.ಎಚ್. ಖಾಲಿದ್, ಸಿ.ಎಂ.ಮುಸ್ತಫಾ ಸಹಕರಿಸಿದರು.