ಪ್ರಿ ಯೂನಿಕ್ 2019 ‘ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆ ಯಲ್ಲಿ ಸೃಜನ್ ಮತ್ತು ಜೋಯೆಲ್ ದ್ವಿತೀಯ ಸ್ಥಾನ

ಪ್ರಿ ಯೂನಿಕ್ 2019 ‘ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆ ಯಲ್ಲಿ ಸೃಜನ್ ಮತ್ತು ಜೋಯೆಲ್ ದ್ವಿತೀಯ ಸ್ಥಾನ

ಮಂಗಳೂರು: ಇತ್ತೀಚೆಗೆ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ‘ ಪ್ರಿ ಯೂನಿಕ್ 2019 ‘ ಎಂಬ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆ ಯಲ್ಲಿ ಸೃಜನ್ ಪ್ರಸಾದ್ ಮತ್ತು ಜೋಯೆಲ್ ಮೋರಸ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಈ ಇಬ್ಬರೂ ಮಂಗಳೂರಿನ ಕ್ಯಾಂಬ್ರಿಡ್ಜ್ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಸೃಜನ್ ಪ್ರಸಾದ್ ಮಂಗಳೂರಿನ ಹಿರಿಯ ನ್ಯಾಯವಾದಿ ರಾಮಪ್ರಸಾದ್ ಎಸ್. ಅವರ ಪುತ್ರ .

ಜೋಯೆಲ್ ಕುಪ್ಪೆಪದವು ನಿವಾಸಿ ಜೋಸೆಫ್ ಮೋರಸ್ ಪುತ್ರ.

ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಗೆ ಕ್ಯಾಂಬ್ರಿಡ್ಜ್ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಸಂತಸ ವ್ಯಕ್ತಪಡಿಸಿದೆ.

Leave a Reply

  Subscribe  
Notify of