ಪ್ರೇರಣಾ – ವಿಜ್ಞಾನೋತ್ಸವ 2026 ಅಧಿಕೃತ ಪೋಸ್ಟರ್ ಬಿಡುಗಡೆ
ಮಂಗಳೂರಿನ ದೇರೆಳಕಟ್ಟೆಯ ಫಾದರ್ ಮುಲ್ಲರ್ ಕ್ಯಾಂಪಸ್‌ನಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಜನ್ ಜಂಟಿಯಾಗಿ “ಪ್ರೇರಣಾ – ವಿಜ್ಞಾನೋತ್ಸವ 2026” ರನ್ನು 27 ಮತ್ತು 28ನೇ ಅಕ್ಟೋಬರ್, 2026ರಂದು ಆಯೋಜಿಸಲಾಗಿದೆ. ಈ ವಿಜ್ಞಾನೋತ್ಸವ ವಿಶೇಷವಾಗಿ ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.

ಗಣ್ಯರು ಮತ್ತು ಸಂಘಟನಾ ತಂಡದ ಸಮ್ಮುಖದಲ್ಲಿ, ಪ್ರೇರಣಾ – ವಿಜ್ಞಾನೋತ್ಸವ 2026 ಮತ್ತು ಮೆಡ್‌ಸ್ಟಾರ್ಟ್ (MEDSTART) – 26 ರ ವಿಜ್ಞಾನೋತ್ಸವದ ಪೂರ್ವಭಾವಿ ಅಧಿಕೃತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು
ಪ್ರೇರಣಾ – ವಿಜ್ಞಾನೋತ್ಸವ 2026 ಯುವ ಮನಸ್ಸುಗಳಿಗೆ ತರಗತಿಯ ಕೊಠಡಿಯನ್ನು ಮೀರಿದ ವಿಜ್ಞಾನ ಲೋಕವನ್ನು ಅನ್ವೇಷಿಸಲು ಒಂದು ರೋಚಕ ವೇದಿಕೆಯಾಗಿ ರೂಪುಗೊಂಡಿದೆ. ಇದರಲ್ಲಿ ವಿಜ್ಞಾನ ಪ್ರದರ್ಶನ, ಸಂವಾದಾತ್ಮಕ ಚಟುವಟಿಕೆಗಳು, ಪ್ರಾಯೋಗಿಕ ಕಲಿಕಾ ಅನುಭವಗಳು ಹಾಗೂ 13ಕ್ಕೂ ಹೆಚ್ಚು ರೋಚಕ ಸ್ಪರ್ಧೆಗಳನ್ನು, ಒಳಗೊಂಡಿವೆ. ವಿಜೇತರಿಗೆ ₹1.5 ಲಕ್ಷಕ್ಕೂ ಅಧಿಕ ಮೌಲ್ಯದ ಬಹುಮಾನಗಳನ್ನು ನೀಡಲಾಗುವುದು.
ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಅವುಗಳಲ್ಲಿ ಶೆರ್ಲಾಕ್ ಚಾಲೆಂಜ್ – ಕಿರು ನಾಟಕ, ವಿಜ್ಞಾನ ರಸಪ್ರಶ್ನೆ, ಒನ್-ಮಿನಿಟ್ ಸೈಂಟಿಸ್ಟ್, ವಿಜ್ಞಾನ ಚರ್ಚೆ, ಜಂಕ್ ಟು ಜೀನಿಯಸ್, AI ಫ್ಲೈಯರ್ ತಯಾರಿಕೆ, ಶಾರ್ಕ್ ಟ್ಯಾಂಕ್, ಸೈನ್ಸ್ ಎಸ್ಕೇಪ್ ರೂಮ್, ವಿಷಯಾಧಾರಿತ ಅಡುಗೆ ಸ್ಪರ್ಧೆ, ಬಯೋ-ಆರ್ಟ್ ಸ್ಪರ್ಧೆ ಮತ್ತು ಪೆನ್ಸಿಲ್ ಸ್ಕೆಚ್ ಸ್ಪರ್ಧೆ ಸೇರಿದಂತೆ ಇನ್ನೂ ಹಲವಾರು ಆಸಕ್ತಿದಾಯಕ ಸ್ಪರ್ಧೆಗಳು ಒಳಗೊಂಡಿವೆ.
ಪೋಸ್ಟರ್ ಸ್ಪರ್ಧೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಬ್ಬರಿಗೂ ಮುಕ್ತವಾಗಿದ್ದು, ತಮ್ಮ ಸೃಜನಶೀಲತೆ, ವೈಜ್ಞಾನಿಕ ಚಿಂತನೆ ಹಾಗೂ ನವೀನ ಆಲೋಚನೆಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ವಿಜ್ಞಾನೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ವಿಜ್ಞಾನ ಪ್ರದರ್ಶನವು ವೈದ್ಯಕೀಯ ವಿಜ್ಞಾನವನ್ನು ಆಧರಿಸಿರುತ್ತದೆ. ಇದರಲ್ಲಿ 25ಕ್ಕೂ ಹೆಚ್ಚು ಸಂವಾದಾತ್ಮಕ ಮಳಿಗೆಗಳು ಇರಲಿದ್ದು, ಆಕರ್ಷಕ ಪ್ರದರ್ಶನಗಳು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನದ ವಿವಿಧ ಆಯಾಮಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸಲಿದೆ.
ಮೆಡ್‌ಸ್ಟಾರ್ಟ್ (MEDSTART) – 26 – ಪ್ರಾಯೋಗಿಕ ವೈದ್ಯಕೀಯ ತರಬೇತಿ
“ಪ್ರೇರಣಾ – ವಿಜ್ಞಾನೋತ್ಸವ 2026 ರ ಅಂಗವಾಗಿ, ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರಾಯೋಗಿಕ ವೈದ್ಯಕೀಯ ತರಬೇತಿ ಕಾರ್ಯಕ್ರಮವಾದ ಮೆಡ್‌ಸ್ಟಾರ್ಟ್ – 26 ಅನ್ನು 27 ಮತ್ತು 28 ಅಕ್ಟೋಬರ್ 2026ರಂದು ಆಯೋಜಿಸಲಾಗುವುದು.
ಮೆಡ್‌ಸ್ಟಾರ್ಟ್– 26 ಕಾರ್ಯಕ್ರಮವು ಯುವ ವಿದ್ಯಾರ್ಥಿಗಳಿಗೆ ಸಂವಾದಾತ್ಮಕ, ಪ್ರಾಯೋಗಿಕ ಮತ್ತು ಅನುಭವಾಧಾರಿತ ಕಲಿಕೆಯ ಮೂಲಕ ವೈದ್ಯಕೀಯ ಕ್ಷೇತ್ರದ ಪರಿಚಯವನ್ನು ಪಡೆಯಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಈ ಕಾರ್ಯಕ್ರಮದಲ್ಲಿ ನಾಲ್ಕು ಆಸಕ್ತಿದಾಯಕ ತರಬೇತಿ ವಿಭಾಗಗಳು ಇರಲಿವೆ:
ಜೀವ ಉಳಿಸಿ – ಮೂಲಭೂತ ಜೀವ ರಕ್ಷಕ ತರಬೇತಿ (BLS)
ಪ್ರತಿಕ್ರಿಯಿಸಲು ಸಿದ್ಧರಾಗಿ – ಪ್ರಥಮ ಚಿಕಿತ್ಸೆ ತರಬೇತಿ
ವಿಜ್ಞಾನ ಪತ್ತೇದಾರಿ – ವೈಜ್ಞಾನಿಕ ಪರಿಶೋಧನೆಯ ಮೂಲಕ ವಿಜ್ಞಾನವನ್ನು ಅನ್ವೇಷಿಸಿ
ಕಾರ್ಯರೂಪದಲ್ಲಿ ವಿಜ್ಞಾನ – ಸಂವಾದಾತ್ಮಕ ಕ್ಲಿನಿಕಲ್ ಮತ್ತು ವೈದ್ಯಕೀಯ ಕಲಿಕೆ
ಮೆಡ್‌ಸ್ಟಾರ್ಟ್ 26 ಪ್ರತಿದಿನ ಎರಡು ಕಲಿಕಾ ಅವಧಿಗಳ ಮೂಲಕ ವಿದ್ಯಾರ್ಥಿಗಳಲ್ಲಿ, ಕುತೂಹಲ, ಆತ್ಮವಿಶ್ವಾಸ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ, ವೈದ್ಯಕೀಯ ವೃತ್ತಿಯ ಕುರಿತು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾದ ಒಂದು ಪರಿಚಯವನ್ನು ನೀಡುತ್ತದೆ.
ಪ್ರೇರಣಾ – ವಿಜ್ಞಾನೋತ್ಸವ 2026 ಮತ್ತು ಮೆಡ್‌ಸ್ಟಾರ್ಟ್ 26 ಕಾರ್ಯಕ್ರಮಗಳೊಂದಿಗೆ , ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಯುವ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರವನ್ನು ಅನ್ವೇಷಿಸಲು, ಪ್ರಯೋಗಿಸಲು, ನವೀನ ಆಲೋಚನೆಗಳನ್ನು ಮೂಡಿಸಲು ಹಾಗೂ ವಿಜ್ಞಾನ ಮತ್ತು ಆರೋಗ್ಯ ಸೇವೆಯ ರೋಮಾಂಚಕ ಅನುಭವವನ್ನು ಪಡೆಯಲು ಪ್ರೇರಣಾದಾಯಕ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.
ರೆವ್. ಫಾ. ಫಾಸ್ಟಿನ್ ಲೂಕಾಸ್ ಲೋಬೋ, ನಿರ್ದೇಶಕರು, FMCI; ರೆವ್. ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ಟಾ, ಆಡಳಿತಾಧಿಕಾರಿಗಳು, FMHMC & FMCOPS; ರೆವ್. ಫಾ. ನೆಲ್ಸನ್ ಧೀರಜ್ ಪೈಸ್, ಆಡಳಿತಾಧಿಕಾರಿಗಳು, FMHPD; ಡಾ. ಪ್ರಭು ಕಿರಣ್, ಪ್ರಾಂಶುಪಾಲರು, FMHMC; ಡಾ. ಸತೀಶ್, ಪ್ರಾಂಶುಪಾಲರು, FMCOPS; ಡಾ. ವಿಲ್ಮಾ ಮೀರಾ ಡಿಸೋಜಾ, ಉಪಪ್ರಾಂಶುಪಾಲರು, FMHMC; ಡಾ. ಗಿರೀಶ್ ನವಾಡ, ವೈದ್ಯಕೀಯ ಅಧೀಕ್ಷಕರು, FMHMC; ಡಾ. ದೀಪಾ ಪಾಯಸ್, ಉಪ ವೈದ್ಯಕೀಯ ಅಧೀಕ್ಷಕರು; ಡಾ. ಇಂದು ಓ.ಎಸ್., ಸಂಚಾಲಕರು; ಶ್ರೀಮತಿ ನಿಶ್ಮಿತಾ, ಸಹ-ಸಂಚಾಲಕರು; ಡಾ. ಧೀರಜ್ ಫರ್ನಾಂಡಿಸ್, ಮಾಧ್ಯಮ ಸಂಯೋಜಕರು ಹಾಗೂ ಡಾ. ಶ್ರೇಯಾಂಕ್ ಕೋಟ್ಯಾನ್, ಸಹ-ಸಂಯೋಜಕರು. ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.












