ಮಂಗಳೂರಿನಲ್ಲಿ 5 ಕೆಜಿ ಎಫ್ಟಿಎಲ್ ಶಿಬಿರ ಆಯೋಜನೆ; ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ
ಮಂಗಳೂರು: ಭಾರತ್ ಪೆಟ್ರೋಲಿಯಂ ಸಂಸ್ಥೆಯ ಭಾರತ್ಗ್ಯಾಸ್ ವಿತರಕರಾದ ಕಾಮಧೇನು ಗ್ಯಾಸ್ ಏಜೆನ್ಸೀಸ್ ವತಿಯಿಂದ ಮಂಗಳೂರು ಎಲ್ಪಿಜಿ ಪ್ರದೇಶದ ಕದ್ರಿ ಮಾರ್ಕೆಟ್, ಮಲ್ಲಿಕಟ್ಟೆಯಲ್ಲಿ 5 ಕೆಜಿ ಎಫ್ಟಿಎಲ್ ಶಿಬಿರವನ್ನು ಆಯೋಜಿಸಲಾಯಿತು.
ವಲಸೆ ಕಾರ್ಮಿಕರು, ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾದ ಈ ಶಿಬಿರಕ್ಕೆ ಹಲವರು ಆಗಮಿಸಿ ಹೊಸ ಯೋಜನೆಗೆ ಆಸಕ್ತಿ ತೋರಿದರು.
ಪ್ರದೇಶ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ರೈನಾ, ಹಿರಿಯ ಮಾರಾಟ ಅಧಿಕಾರಿಯಾದ ಅನಂತ ರಾವ್ ಹಾಗೂ ವಿತರಕರಾದ ದಿನೇಶ್ ಶೆಟ್ಟಿ ಅವರು 5 ಕೆಜಿ ಎಫ್ಟಿಎಲ್ ಯೋಜನೆಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನೂ ವಿವರಿಸಿದರು.
ಶಿಬಿರದಲ್ಲಿ ಸ್ಥಳದಲ್ಲೇ ವಿವಿಧ ವಿಚಾರಣೆಗಳನ್ನು ಸ್ವೀಕರಿಸಿ ನೋಂದಣಿ ಪ್ರಕ್ರಿಯೆಯನ್ನೂ ನಡೆಸಲಾಯಿತು.













