ಮಂಗಳೂರಿನ MRPL ಘಟಕದಲ್ಲಿ ಬೆಂಕಿ: ಓರ್ವ ಸಾವು, ಮತ್ತೋರ್ವ ಗಾಯ

Spread the love

ಮಂಗಳೂರಿನ MRPL ಘಟಕದಲ್ಲಿ ಬೆಂಕಿ: ಓರ್ವ ಸಾವು, ಮತ್ತೋರ್ವ ಗಾಯ

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 12:20ಕ್ಕೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ಸುಟ್ಟ ಗಾಯಗೊಂಡಿದ್ದಾರೆ.

MRPL ನೀಡಿರುವ ಮಾಹಿತಿಯ ಪ್ರಕಾರ, ಬೆಂಕಿಯನ್ನು ಮಧ್ಯಾಹ್ನ 2:47ರ ವೇಳೆಗೆ ನಿಯಂತ್ರಣಕ್ಕೆ ತಂದು ಸಂಪೂರ್ಣವಾಗಿ ನಂದಿಸಲಾಯಿತು.

ಅಗ್ನಿಶಾಮಕ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ, ಪರಿಣಾಮಕ್ಕೊಳಗಾದ ಸ್ಥಳದಲ್ಲಿ ನಡೆಸಲಾದ ಪರಿಶೀಲನೆ ಹಾಗೂ ಶೋಧ ಕಾರ್ಯಾಚರಣೆ ವೇಳೆ ಓರ್ವ ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ.

ಅವಘಡದಲ್ಲಿ ಸುಟ್ಟ ಗಾಯಗೊಂಡಿರುವ ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಗತ್ಯ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ.

ಮಧ್ಯಾಹ್ನದ ವೇಳೆಗೆ ಕೂಕರ್ ಹೈಡ್ರೋಟ್ರೀಟರ್ ಘಟಕ (CHTU)ದಲ್ಲಿ ಅಧಿಕ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲ್ಡ್ ಸೆಪರೇಟರ್ ಒಡೆದುಹೋದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಪರಿಣಾಮಕ್ಕೊಳಗಾದ ಘಟಕದ ಬ್ಯಾಟರಿ ಲಿಮಿಟ್‌ಗಳನ್ನು ಪ್ರತ್ಯೇಕಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು MRPLನ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಅಗ್ನಿಶಾಮಕ ತಂಡಗಳನ್ನು ನಿಯೋಜಿಸಲಾಯಿತು.

ಮತ್ತಷ್ಟು ಪರಿಶೀಲಿತ ಮಾಹಿತಿಗಳು ಲಭ್ಯವಾದಂತೆ ಹಂಚಿಕೊಳ್ಳಲಾಗುವುದು ಎಂದು MRPL ತಿಳಿಸಿದೆ.


Spread the love
Subscribe
Notify of

0 Comments