ಮಂಗಳೂರು:  ಪೈಂಟ್‌ ಮಾಡುತ್ತಿದ್ದಾಗ ಕಟ್ಟಡದಿಂದ ಬಿದ್ದು ಸಾವು

Spread the love

ಮಂಗಳೂರು:  ಪೈಂಟ್‌ ಮಾಡುತ್ತಿದ್ದಾಗ ಕಟ್ಟಡದಿಂದ ಬಿದ್ದು ಸಾವು
 
ಮಂಗಳೂರು: ಯುವಕನೋರ್ವ ಪೈಂಟ್‌ ಮಾಡುತ್ತಿದ್ದಾಗ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಶಕ್ತಿನಗರದಲ್ಲಿ ಶನಿವಾರ ಸಂಭವಿಸಿದೆ.

ಕುಡುಪು ಕೊಂಚಾಡಿ ನಿವಾಸಿ ಮೋಹಿತ್‌ ಪೂಜಾರಿ (26) ಮೃತಪಟ್ಟವರು. ಅವರು ಮನೆಯೊಂದರ ಎರಡನೇ ಮಹಡಿಯಲ್ಲಿ ಪೈಂಟ್‌ ಮಾಡುತ್ತಿದ್ದರು. ಆಗ ಏಣಿ ಜಾರಿ ಅವರು ಪಕ್ಕದ ರಸ್ತೆಗೆ ಬಿದ್ದಿದ್ದಾರೆ.

ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love