ಸಂಸದ ನಳಿನ್ ಕುಮಾರ್ ಅವರಿಂದ ಪಡೀಲ್ ರೈಲ್ವೆ ಕೆಳಸೇತುವೆ ಲೋಕಾರ್ಪಣೆ

Spread the love

ಸಂಸದ ನಳಿನ್ ಕುಮಾರ್ ಅವರಿಂದ ಪಡೀಲ್ ರೈಲ್ವೆ ಕೆಳಸೇತುವೆ ಲೋಕಾರ್ಪಣೆ

ಮಂಗಳೂರು: ನಗರ ಹೊರವಲಯದ ರಾಹೆ 75 ರ ಪಡೀಲ್-ಕೊಡಕ್ಕಲ್ ಬಳಿ ಸುಮಾರು ರೂ 16.50 ಕೋಟಿ ವೆಚ್ಚದಲ್ಲಿ  ನಿರ್ಮಿಸಲಾಗಿರುವ ರೈಲ್ವೆ ಕೆಳ ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.

ಬಳಿಕ ಮಾತನಾಡಿದ ನಳಿನ್ ಕುಮಾರ್ ಸುರತ್ಕಲ್ -ಬಿ.ಸಿ. ರೋಡ್ ರಾಹೆದ್ದಾರಿಯನ್ನು ಸಾಗರ್ ಮಾಲ ಯೋಜನೆಯಡಿ ರೂ 500 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಮಂಜೂರಾತಿ ನೀಡಿದೆ ಎಂದರು.

ಈ ವೇಳೆ ಕಾರ್ಪೋರೇಟರ್ ಪ್ರಕಾಶ್, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ ಬಂಗೇರ, ವಿಜಯ್ ಕುಮಾರ್, ರೈಲ್ವೇ ಸಲಹಾ ಸಮಿತಿ ಸದಸ್ಯ ಅಹ್ಮದ್ ಬಾವ, ಗುತ್ತಿಗೆದಾರ ಅರುಣ್, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್ ಉಪಸ್ಥಿತರಿದ್ದರು.


Spread the love

1 Comment

Comments are closed.