ಸರ್ಕಾರದ ಆದೇಶಕ್ಕೆ ಉಡುಪಿಯಲ್ಲಿ ಡೋಂಟ್ ಕೆರ್ – ಮಾಲ್ ಗಳು ಎಂದಿನಂತೆ ಕಾರ್ಯಾಚರಣೆ

Spread the love

ಸರ್ಕಾರದ ಆದೇಶಕ್ಕೆ ಉಡುಪಿಯಲ್ಲಿ ಡೋಂಟ್ ಕೆರ್ – ಮಾಲ್ ಗಳು ಎಂದಿನಂತೆ ಕಾರ್ಯಾಚರಣೆ

ಉಡುಪಿ: ಮಾರಣಾಂತಿಕ ಕೊರೋನಾ ವೈರಸ್ ಹರಡದಂತೆ ತಡೆಯಲು ರಾಜ್ಯದಾದ್ಯಂತ ಶನಿವಾರದಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ ಮತ್ತು ಮದುವೆ, ಸಭೆ-ಸಮಾರಂಭಗಳಲ್ಲಿ 100ಕ್ಕಿಂತಲೂ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು ಇದಕ್ಕೆ ಉಡುಪಿಯ ಮಾಲ್ ಗಳು ಕ್ಯಾರೆ ಅಂದಿಲ್ಲ.

ಉಡುಪಿಯ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಾಲ್ ಗಳು ರಾಜ್ಯ ಸರಕಾರದ ಆದೇಶ ಯಾವುದೇ ರೀತಿಯಲ್ಲಿ ತಮಗೆ ಲಾಗು ಆಗುವುದಿಲ್ಲ ಎಂದು ಎಂದಿನಂತೆ ಕಾರ್ಯಾಚರಣೆ ನಡೆಯುತ್ತಿವೆ. ಸಾರ್ವಜನಿಕರು ಕೂಡ ಎಂದಿನಂತೆ ವಸ್ತುಗಳನ್ನು ಖರೀದಿಸಲು ಮಾಲ್ ಗಳಿಗೆ ತೆರಳುತ್ತಿರುವುದು ಕಂಡು ಬಂತು.

ಈ ಕುರಿತು ಮಾಲ್ ಗಳ ಮುಖ್ಯಸ್ಥರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ನಮಗೆ ಈ ವರೆಗೆ ಯಾವುದೇ ಆದೇಶ ಪ್ರತಿ ಬಂದಿಲ್ಲ ಆದ್ದರಿಂದ ನಾವು ಕಾರ್ಯಾಚರಿಸುತ್ತೇವೆ ಎಂದರು.

ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಕೇಳಿದಾಗ ಮುಖ್ಯಮಂತ್ರಿಗಳು ಅಧಿಕೃತವಾಗಿ ಸೂಚನೆ ನೀಡಿದ್ದು ನಗರ ಸಭೇಯ ಆಯುಕ್ತರಿಗೆ ಸೂಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.


Spread the love