ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕಾನೂನು ತರಬೇತಿ: ಅರ್ಜಿ ಆಹ್ವಾನ 

Spread the love

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕಾನೂನು ತರಬೇತಿ: ಅರ್ಜಿ ಆಹ್ವಾನ 

ಮಂಗಳೂರು: ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಸರಕಾರಿ ವಕೀಲರ ಅಧೀನದಲ್ಲಿ ನಾಲ್ಕು ವರ್ಷಗಳ ಅವಧಿಯ ಉಚಿತ ಕಾನೂನು ತರಬೇತಿಯನ್ನು ನೀಡುವ ಕಾರ್ಯಕ್ರಮದಡಿ, ಕಾನೂನು ತರಬೇತಿ ಪಡೆಯಲಿಚ್ಚಿಸುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ ಕಾನೂನು ಪದವೀಧರರಿಂದ 2026-27ನೇ ಸಾಲಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿತರಾದ ಕಾನೂನು ಪದವೀಧರರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯವು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.2.50 ಲಕ್ಷವನ್ನು ಮೀರಿರಬಾರದು. ಪ್ರವರ್ಗ-1 ರ ಅಭ್ಯರ್ಥಿಗಳು 40 ವರ್ಷಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 38 ವರ್ಷದೊಳಗಿನ ಗರಿಷ್ಠ ವಯೋಮಿತಿಯವರಾಗಿರತಕ್ಕದ್ದು. ತರಬೇತಿ ಅವಧಿಯಲ್ಲಿ ಹಾಜರಾತಿಗನುಸಾರವಾಗಿ ಮಾಹೆಯಾನ ರೂ.4,000 ತರಬೇತಿ ಭತ್ಯೆಯನ್ನು ಪಾವತಿಸಲಾಗುತ್ತದೆ.

ನಿಗದಿತ ಅರ್ಜಿ ನಮೂನೆಯನ್ನು ನಗರದ ಬಿಜೈ-ಕಾಪಿಕಾಡ್ ಆನೆಗುಂಡಿ ರೋಡ್‍ನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಛೇರಿಯಿಂದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 25 ರೊಳಗಾಗಿ ಸಲ್ಲಿಸಬೇಕು.

ಅರ್ಜಿಯೊಂದಿಗೆ ವರ್ಗಾವಣೆ ಪ್ರಮಾಣ ಪತ್ರದ ಪ್ರತಿ, ಪದವಿ/ಕಾನೂನು ಪದವಿಯ ಅಂಕ ಪಟ್ಟಿಗಳು, ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿತರಾಗಿರುವ ಬಗ್ಗೆ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಇತ್ತೀಚಿನ ಎರಡು ಭಾವಚಿತ್ರ (ಪಾಸ್‍ಪೆÇೀರ್ಟ್ ಸೈಜ್) ಗಳನ್ನು ಲಗತ್ತಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments