ಹೆಬ್ರಿ: ಬೈಕಿಗೆ ಜೆಸಿಬಿ ಡಿಕ್ಕಿ – ಯುವಕ ಮೃತ್ಯು

Spread the love

ಹೆಬ್ರಿ: ಬೈಕಿಗೆ ಜೆಸಿಬಿ ಡಿಕ್ಕಿ – ಯುವಕ ಮೃತ್ಯು

ಹೆಬ್ರಿ: ಬೈಕಿಗೆ ಜೆಸಿಬಿಯೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಹೆಬ್ರಿ ತಾಲೂಕು ಶಿವಪುರ ಸಮೀಪದ ನಾಯರ್ ಕೋಡು ಎಂಬಲ್ಲಿ ಶುಕ್ರವಾರ ಸಂಭವಿಸಿದೆ.

ಮೃತ ಯುವಕನನ್ನು ನಾಯರ್ ಕೋಡು ನೀವಾಸಿ ಪ್ರತ್ಯಕ್ಷ ಶೆಟ್ಟಿ ಎಂದು ಗುರುತಿಸಲಾಗಿದ್ದು ಹಿಂಬದಿ ಸವಾರ ಪ್ರೀತಿಶ್ ಗಾಯಗೊಂಡಿದ್ದಾರೆ.

ಮಾಹಿತಿಗಳ ಪ್ರಕಾರ ಪ್ರತ್ಯಕ್ಷ ಶೆಟ್ಟಿ ತನ್ನ ಸಹೋದರ ಪ್ರೀತಿಶ್ ಅವರನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಜೆಸಿಬಿ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಪ್ರತ್ಯಕ್ಷ ಶೆಟ್ಟಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯ ಮೃತಪಟ್ಟಿದ್ದಾರೆ.

ಪತ್ಯಕ್ಷ ಶೆಟ್ಟಿ ಹೆಬ್ರಿ ಶಿವಪುರ ಭಾಗದಲ್ಲಿ ಪತ್ರಿಕಾ ವಿತರಕರಾಗಿ, ಶಿವಪುರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಂದಯನ್ನು ಕಳೆದುಕೊಂಡಿದ್ದ ಪ್ರತ್ಯಕ್ಷ ಮನೆಗೆ ಆಧಾರ ಸ್ತಂಭವಾಗಿದ್ದು ಇವರ ತಾಯಿ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments