ಉಡುಪಿ ತಾಲೂಕಿನ ಮೊದಲ ವಾಣಿಜ್ಯ ಪೈಲಟ್ ಆಗಿ ಇನ್ಶಾ ತಸ್ಕೀನ್

Spread the love

ಉಡುಪಿ ತಾಲೂಕಿನ ಮೊದಲ ವಾಣಿಜ್ಯ ಪೈಲಟ್ ಆಗಿ ಇನ್ಶಾ ತಸ್ಕೀನ್

ಉಡುಪಿ: ನಗರದ ಬೈಲೂರು ನಿವಾಸಿ ಇನ್ಶಾ ತಸ್ಕೀನ್ ಅವರು ಉಡುಪಿ ತಾಲೂಕಿನ ಮೊದಲ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಕೊರಂಗ್ರಪಾಡಿ ಬೈಲೂರು ನಿವಾಸಿ ಇಕ್ಲಾಕ್ ಅಹಮ್ಮದ್ ಮತ್ತು ಸೈಯದ್ ತಬಸ್ಸುಮ್ ಅವರ ಪುತ್ರಿಯಾಗಿರುವ ಇನ್ಶಾ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ನಂತರ, ವಾಣಿಜ್ಯ ಪೈಲಟ್ ಆಗಬೇಕೆಂಬ ತಮ್ಮ ಕನಸನ್ನು ನನಸಾಗಿಸಲು ಇನ್ಶಾ ಅವರು ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದ Red Bird Flight Training Academyಯಲ್ಲಿ ಮೂರು ವರ್ಷಗಳ ಕಠಿಣ ತರಬೇತಿ ಪಡೆದರು.

ಅವರ ಸಮರ್ಪಣೆ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಫಲವಾಗಿ, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಫೆಬ್ರವರಿ 2026ರಲ್ಲಿ Commercial Pilot Licence (CPL) ಪಡೆದಿದ್ದಾರೆ.

ಈ ಅದ್ಭುತ ಸಾಧನೆಯು ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಸಂಪೂರ್ಣ ಉಡುಪಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.


Spread the love
Subscribe
Notify of

0 Comments