ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ ;  16 ಎತ್ತುಗಳ ರಕ್ಷಣೆ, ಇಬ್ಬರ ಬಂಧನ

Spread the love

ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ ;  16 ಎತ್ತುಗಳ ರಕ್ಷಣೆ, ಇಬ್ಬರ ಬಂಧನ

ಮಂಗಳೂರು: ಮೊಟ್ಟೆ ಸಾಗಾಟ ವಾಹನದಲ್ಲಿ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದು ಕೇರಳದ ಕಸಾಯಿ ಖಾನೆಗೆ ಒಯ್ಯುತ್ತಿದ್ದ 16 ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ. ಲಾರಿ ಚಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಪೊಲೀಸರು ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಕೇರಳದ ಕಾಸರಗೋಡಿಗೆ ಮಾಂಸ ಮಾಡುವ ಉದ್ದೇಶದಿಂದ ಎತ್ತುಗಳನ್ನು ಸಾಗಿಸುತ್ತಿದ್ದರು ಎಂಬುದನ್ನು ಪತ್ತೆ ಮಾಡಿದ್ದಾರೆ. ಮಂಗಳೂರು – ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಜಾನುವಾರುಗಳ ಸಾಗಾಟದ ಬಗ್ಗೆ ಮಾಹಿತಿ ಆಧರಿಸಿ ಕಂಕನಾಡಿ ನಗರ ಠಾಣೆಯ ಪೊಲೀಸರು ಮೊಟ್ಟೆ ಸಾಗಾಟದ ಕಂಟೇನ‌ರ್ ಲಾರಿಯನ್ನು ಪಂಪೈಲ್ ಬಳಿಯಲ್ಲಿ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಲಾರಿಯ ಹಿಂಬದಿ ಮೋಟ್ಟೆ ಟ್ರೇಗಳನ್ನು ಪೇರಿಸಿಟ್ಟು ಒಳಗಿನ ಕ್ಯಾಬಿನ್ನಲ್ಲಿ 16 ಎತ್ತುಗಳನ್ನು ತುಂಬಿಸಿದ್ದರು. ಯಮಕನಮರಡಿ ನಿವಾಸಿ ದಸ್ತಗಿರ್ ಎಂಬವರಿಗೆ ಸೇರಿದ 16 ಎತ್ತುಗಳು ಇದಾಗಿದ್ದು ಮಂಗಳೂರು ಮೂಲಕ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು.

ಲಾರಿ ಚಾಲಕ ಮೈಸೂರಿನ ರಫೀಕ್ (52) ಹಾಗು ರೆಹಮಾನ್ ಎಂಬವರನ್ನು ಬಂಧಿಸಿದ್ದು ವಶಕ್ಕೆ ಪಡೆದ 16 ಎತ್ತುಗಳನ್ನು ಕೋಣಾಜೆ ಪಜೀರ್ ನ ಗೋಶಾಲೆಗೆ ಸಾಗಿಸಿದ್ದಾರೆ. ಅಕ್ರಮ ಜಾನುವಾರು ಸಾಗಾಟ ಜಾಲದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಬಗ್ಗೆ ಮಾಹಿತಿಗಳಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love
Subscribe
Notify of

0 Comments