ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಬಹಿಷ್ಕರಿದ ಜನವಿರೋಧಿ ಬಿಜೆಪಿ ಶಾಸಕರುಗಳು: ಕೆ ವಿಕಾಸ್ ಹೆಗ್ಡೆ

Spread the love

ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಬಹಿಷ್ಕರಿದ ಜನವಿರೋಧಿ ಬಿಜೆಪಿ ಶಾಸಕರುಗಳು: ಕೆ ವಿಕಾಸ್ ಹೆಗ್ಡೆ

ಕುಂದಾಪುರ: ಉಡುಪಿಯಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಬಹಿಷ್ಕರಿಸುವುದರ ಮೂಲಕ ಜಿಲ್ಲೆಯ ಬಿಜೆಪಿ ಶಾಸಕರುಗಳು ತಾವು ಗ್ಯಾರಂಟಿ ಯೋಜನೆ ಮಾತ್ರವಲ್ಲದೆ ಯೋಜನೆ ಫಲಾನುಭವಿಗಳ ವಿರೋಧಿಗಳು ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಕೇವಲ ಕಾಂಗ್ರೆಸ್ ಕಾರ್ಯಕರ್ತರುಗಳು ಮತ್ತು ಕಾಂಗ್ರೆಸ್ ಪರವಾದ ಮತದಾರರಿಗೆ ಮಾತ್ರ ನೀಡಿದ್ದಲ್ಲಾ. ಇವತ್ತು ರಾಜ್ಯದ ಪಂಚ ಗ್ಯಾರಂಟಿ ಫಲಾನುಭವಿಗಳು ರಾಜ್ಯದ ಪ್ರತಿಯೊಬ್ಬ ನಾಗರಿಕರು. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಾವುದೇ ಜಾತಿ, ಧರ್ಮ, ಮತ, ಪಂತ ಬೇಧ ಮಾಡದೆ ಎಲ್ಲರಿಗೂ ನೀಡಿದೆ. ಉಡುಪಿ ಜಿಲ್ಲೆಯಲ್ಲಿ ಐದು ವಿಧಾನ ಸಭಾ ಸದಸ್ಯರು ಬಿಜೆಪಿಯವರಾದರೂ ಸಹ ಗ್ಯಾರಂಟಿ ಯೋಜನೆ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ತಾರತಮ್ಯ ಮಾಡಲಿಲ್ಲ. ಆದರೆ ನಿರಂತರ ಬಿಜೆಪಿಯನ್ನು ಗೆಲ್ಲಿಸುವ ಮತದಾರರು ಇವತ್ತಿನ ಸರ್ಕಾರಿ ಕಾರ್ಯಕ್ರಮದ ಮೂಲಕ ಗ್ಯಾರಂಟಿ ಯೋಜನೆಯನ್ನು ಸಂಭ್ರಮಿಸುತ್ತಿರುವಾಗ ಅವರ ಸಂಭ್ರಮದ ಭಾಗವಾಗಬೇಕಾಗಿದ್ದ ಬಿಜೆಪಿ ಶಾಸಕರುಗಳು ಇಂದಿನ ಕಾರ್ಯಕ್ರಮಕ್ಕೆ ಗೈರು ಹಾಜರಾದದ್ದು ಅವರ ಜನ ವಿರೋಧಿ ನಿಲುವನ್ನು ಏತ್ತಿ ತೋರಿಸುತ್ತದೆ.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟು ಮಾತ್ರ ಎಂದು ತಿಳಿದಿರುವ ಬಿಜೆಪಿ ಶಾಸಕರುಗಳು ಪಂಚ ಗ್ಯಾರಂಟಿಯಂತಹ ಕಾರ್ಯಕ್ರಮಗಳು ಕೂಡ ರಾಜ್ಯದ ಅಭಿವೃದ್ಧಿಯ ಭಾಗ ಎನ್ನುವುದನ್ನು ತಿಳಿದುಕೊಳ್ಳುವ ಮನಸ್ಥಿತಿಯನ್ನು ಇನ್ನಾದರೂ ಬೆಳೆಸಿಕೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments