ಅಮಾಸೆಬೈಲು ವಿದ್ಯುತ್ ಸಮಸ್ಯೆಗೆ ಮುಕ್ತಿ: ನಾಯಕರಿಗೆ ಕೆ ವಿಕಾಸ್ ಹೆಗ್ಡೆ ಧನ್ಯವಾದ

Spread the love

ಅಮಾಸೆಬೈಲು ವಿದ್ಯುತ್ ಸಮಸ್ಯೆಗೆ ಮುಕ್ತಿ: ನಾಯಕರಿಗೆ ಕೆ ವಿಕಾಸ್ ಹೆಗ್ಡೆ ಧನ್ಯವಾದ

ಕುಂದಾಪುರ: ಶಾಸಕರ ಸ್ವಗ್ರಾಮ ಅಮಾಸೆಬೈಲು ಗ್ರಾಮದಲ್ಲಿ ಇಲ್ಲಿಯ ತನಕ ಉಪ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣಕ್ಕೆ ಜಾಗ ಮಂಜೂರು ಆಗದ ಕಾರಣ ಗ್ರಾಮದಲ್ಲಿ ವಿದ್ಯುತ್ ಪ್ರಸರಣದಲ್ಲಿನ ಸಮಸ್ಯೆಯಿಂದ ಕೃಷಿ ಪಂಪ್ಸೆಟ್ಗಳು ಹಾಗೂ ವಿದ್ಯುತ್ ಚಾಲಿತ ಗೃಹೋಪಯೋಗಿ ವಸ್ತುಗಳು ನಿರಂತರ ಹಾಳಾಗಿ ಗ್ರಾಮಸ್ಥರು ಪಡುತ್ತಿದ್ದ ತೊಂದರೆಯನ್ನು ಮನಗಂಡು ಹಾಲಾಡಿ ಉಪ ವಿದ್ಯುತ್ ಪ್ರಸರಣ ಕೇಂದ್ರದಿಂದ ನೇರ ಸಂಪರ್ಕ ಒದಗಿಸಲು ವಿದ್ಯುತ್ ಲೈನ್ ನಿರ್ಮಾಣಕ್ಕೆ ಅನುದಾನ ಮಂಜೂರಾತಿಗೆ ಮಾನ್ಯ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಅವರ ಗಮನಕ್ಕೆ ತಂದು, ಮಾನ್ಯ ಸಚಿವರ ಶಿಫಾರಸ್ಸು ಮೇರೆಗೆ ಸುಮಾರು 65 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿದ ಕುಂದಾಪುರದ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕೃಷ್ಣ ಪೂಜಾರಿ ಕೊಯ್ಲಾಡಿ ಅವರಿಗೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಮಾಧ್ಯಮ ಹೇಳಿಕೆ ಮೂಲಕ ಧನ್ಯವಾದಗಳನ್ನು ತಿಳಿಸಿರುತ್ತಾರೆ.


Spread the love
Subscribe
Notify of

0 Comments