Spread the love
ಆಗಸ್ಟ್ 16 ರಂದು ಪಿಲಿಕುಳ ಆಟಿಕೂಟ ಕಾರ್ಯಕ್ರಮ
ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕೆನರಾ ಬ್ಯಾಂಕ್ ಇವರ ಸಹಯೋಗದೊಂದಿಗೆ ಪಿಲಿಕುಳ ಆಟಿಕೂಟ 2026 ಕಾರ್ಯಕ್ರಮ ಆಗಸ್ಟ್ 16 ರಂದು ಬೆಳಿಗ್ಗೆ 11 ಗಂಟೆಗೆ ಪಿಲಿಕುಳ ಸಂಸ್ಕøತಿ ಗ್ರಾಮ ಗುತ್ತು ಮನೆಯಲ್ಲಿ ನಡೆಯಲಿದೆ.
ಕಾರ್ಯಕ್ರಮಗಳ ವಿವರ
ಸಭಾ ಕಾರ್ಯಕ್ರಮ ಬೆಳಿಗ್ಗೆ 11 ರಿಂದ, ಸಾಂಸ್ಕøತಿಕ ಕಾರ್ಯಕ್ರಮ ಮಧ್ಯಾಹ್ನ 12 ರಿಂದ ‘ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಾರಂಪಳ್ಳಿ’ ಶ್ರೀ ಗುರು ಮಾರುತಿ ಹೌಂದೇರಾಯನ ಓಲಗ ಕಲಾ ತಂಡ, ಸಾಲಿಗ್ರಾಮ, ಉಡುಪಿ ಜಿಲ್ಲೆ ಇವರಿಂದ ಜಾನಪದ ನೃತ್ಯ ರೂಪಕ ‘ಹೌಂದೇಶಾಯನ ಓಲಗ’ ಬಳಿಕ ಆಟಿ ಶೈಲಿಯ ವಿಶೇಷ ಭೋಜನ ಮಧ್ಯಾಹ್ನ 1 ರಿಂದ 2.30 ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Spread the love













