ಡಬ್ಬಲ್ ಮರ್ಡರ್ ಪ್ರಕರಣ ನಾಲ್ವರ ಬಂಧನ

Spread the love

ಡಬ್ಬಲ್ ಮರ್ಡರ್ ಪ್ರಕರಣ ನಾಲ್ವರ ಬಂಧನ

ಮಂಗಳೂರು: ಫರಂಗಿಪೇಟೆಯಲ್ಲಿ ನಡೆದ ಡಬ್ಬಲ್ ಮರ್ಡರ್ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಡಿಸಿಐಬಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನರು ಮಹಮ್ಮದ್ ಹುಸೈನ್ ಯಾನೆ ಮುನ್ನ (29), ನೌಫಲ್ ಯಾನೆ ಟೊಪ್ಪಿ ನೌಫಲ್ (25), ಮಹಮ್ಮದ್ ಆಸಿಫ್ ಯಾನೆ ಅಚ್ಚಿ ಯಾನೆ ಮೂಸಾ ಅಚ್ಚಿ (27) ಇಬ್ರಾಹಿಂ ಯಾನೆ ಡೊಡ್ಡ ಪುತ್ತಾ (26) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 26 ರಾತ್ರಿ ಫರಂಗೀಪೇಟೆಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಜಿಯಾ ಮತ್ತು ಫಯಾಜ್ ಎಂಬವರು ಕೊಲೆಗೀಡಾಗಿದ್ದರು. ಕ್ವಾಲಿಸ್ ಹಾಗೂ ಟೆಂಪೋದಲ್ಲಿ ಬಂದಿದ್ದ ಹಂತಕರು ಅಟ್ಟಾಡಿಸಿ ತಲವಾರು ದಾಳಿ ನಡಸಿದ್ದು ಈ ಘಟನೆಯಿಂದ ಅನಿಶ್ ಫೈಜಲ್ ಮತ್ತು ಮುಸ್ತಾಕ ಎಂಬವರು ಗಂಬೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹಳೆಯ ದ್ವೇಷವೇ ಈ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಏಳು ಜನರನ್ನು ಪೋಲಿಸರನ್ನು ಬಂಧಿಸಿದ್ದರು. ಉಡುಪಿಯಲ್ಲಿ ಶುಕ್ರವಾರ ಡಿಸಿಐಬಿ ನಡೆಸಿದ ಕಾರ್ಯಾಚರಣೆಯಲ್ಲಿ ತಲೆಮರೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಟ್ವಾಳ ನಗರ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು 11 ಕ್ಕೆ ಏರಿದೆ.


Spread the love