ಪಡೀಲ್‌ ನ ಕಾರು ಶೋರೂಂನಲ್ಲಿ ಬೆಂಕಿ: ವಾಹನಗಳಿಗೆ ಹಾನಿ

Spread the love

ಪಡೀಲ್‌ ನ ಕಾರು ಶೋರೂಂನಲ್ಲಿ ಬೆಂಕಿ: ವಾಹನಗಳಿಗೆ ಹಾನಿ

ಪಡೀಲ್‌ ನ ಕಾರು ಶೋರೂಂವೊಂದರಲ್ಲಿ ಶುಕ್ರವಾರ ರಾತ್ರಿ ಹಠಾತ್ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕದಳದವರು ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಹಠಾತ್ ಹೊಗೆ ಕಾಣಿಸಿಕೊಂಡು ಇಡೀ ಶೋರೂಂ ಆವರಿಸಿದೆ. ನೋಡನೋಡುತ್ತಿದ್ದ ಬೆಂಕಿ ಶೋರೂಂಗೆ ಹೊತ್ತಿಕೊಂಡಿದೆ. ಶೋರೂಂ ಒಳಗಿದ್ದ ಕಾರುಗಳಿಗೂ ಹಾನಿಯಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಂಟೆಗಳ ಕಾಲ ಕಾರ್ಯಾಚರಣೆ ಬೆಂಕಿ ನಂದಿಸಿದ್ದಾರೆ. ನಷ್ಟ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಾಗಿದೆ.


Spread the love
Subscribe
Notify of

0 Comments